2017ರಿಂದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಿದವರೆಷ್ಟು ? ಅಂಕಿ ಅಂಶಗಳು ಹುಬ್ಬೇರಿಸುತ್ತಿವೆ..!

Prasthutha|

ಹೊಸದಿಲ್ಲಿ : 2017-2020ರ ಅವಧಿಯಲ್ಲಿ ಒಟ್ಟು 168 ಜನಪ್ರತಿನಿಧಿಗಳು( ಎಂಪಿ, ಎಮ್ ಎಲ್ ಎ) ವಿವಿಧ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ. ಅದರಲ್ಲಿ 138 ಜನಪ್ರತಿನಿಧಿಗಳು(82%) ವಿವಿಧ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರಗೊಂಡವರಾಗಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಹೆಚ್ಚಿನವರು ಕಾಂಗ್ರೆಸ್ ನಿಂದ ಅಂದರೆ 79 ಮಂದಿ ಪಕ್ಷಾಂತರಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಬಿಜೆಪಿಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಪಕ್ಷದ ಮಾಜಿ ಸಚಿವರು, ಮಾಜಿ ಸಂಸದರು ಮತ್ತು ಮಾಜಿ ಶಾಸಕರನ್ನು ಸೇರಿಸಲಿಲ್ಲ. ಈಗಿನ ಪಕ್ಷಾಂರಗಳ ಹರಿವು ಹಿಂದೆಂದಿಗಿಂತಲೂ ಪ್ರಬಲವಾಗಿದೆ ಎಂದು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಪ್ರಾಧ್ಯಾಪಕ ಸಂಜಯ್ ಕುಮಾರ್ ಹೇಳುತ್ತಾರೆ.

- Advertisement -

ಪಕ್ಷಾಂತರ ವಿರೋಧಿ ಕಾನೂನು ಸಾಕಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಈ ಅಂಕಿ ಅಂಶಗಳು ತೋರಿಸುತ್ತವೆ. ಈ ಕಾನೂನನ್ನು 1985 ರಲ್ಲಿ ಸಂವಿಧಾನದ 52 ನೇ ತಿದ್ದುಪಡಿಯಾಗಿ ಪರಿಚಯಿಸಲಾಗಿತ್ತು. ಸಂವಿಧಾನದ 91 ನೇ ತಿದ್ದುಪಡಿಯ ಮೂಲಕವೂ ಕಾನೂನಿನಲ್ಲಿ ಬದಲಾವಣೆಗಳನ್ನು ತರಲಾಯಿತು.

ಇತ್ತೀಚಿನ ಪಕ್ಷಾಂತರಗಳು….

- Advertisement -
  1. ಹತ್ತು ತೃಣಮೂಲ ಕಾಂಗ್ರೆಸ್ ಶಾಸಕರು ಮತ್ತು ಓರ್ವ ಸಂಸದ ವಿಧಾನಭಾ ಚುನಾವಣೆಯ ಸಿದ್ಧತೆಯ ನಡುವೆ ಬಂಗಾಳದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
  2. ಅರುಣಾಚಲ ಪ್ರದೇಶದಲ್ಲಿ ಏಳು ಜೆಡಿಯು ಶಾಸಕರಲ್ಲಿ ಆರು ಮಂದಿ ಬಿಜೆಪಿಗೆ ಸೇರ್ಪಡೆ.
  3. 2020 ರ ಕೊನೆಯಲ್ಲಿ 26 ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪಕ್ಷಾಂತರ.
  4. 2019 ಜುಲೈ ಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನಿಂದ 11 ಮತ್ತು ಜೆಡಿಎಸ್‌ನಿಂದ ಮೂವರು ಶಾಸಕರು ಬಿಜೆಪಿಗೆ.
  5. ಸಿಕ್ಕಿಂನಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ ಹತ್ತು ಸದಸ್ಯರು ರಾತ್ರೋ ರಾತ್ರಿ ಬಿಜೆಪಿಗೆ ಸೇರಿದರು.
  6. 2017 ರಲ್ಲಿ ಮಣಿಪುರದಲ್ಲಿ ಸಚಿವ ಟಿ ಶ್ಯಾಮಕುಮಾರ್ ಸೇರಿದಂತೆ ಏಳು ಜನರು ಬಿಜೆಪಿಗೆ ಸೇರಿದ್ದರು.

ಪಕ್ಷಾಂತರ ವಿರೋಧಿ ಕಾಯ್ದೆ

1985 ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಸಂವಿಧಾನದ 52 ನೇ ತಿದ್ದುಪಡಿಯ ಮೂಲಕ ಪಕ್ಷಾಂತರ ವಿರೋಧಿ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿತ್ತು. ಈ ನಿಟ್ಟಿನಲ್ಲಿ ಸೆಕ್ಷನ್ 102ರಲ್ಲಿ ತಿದ್ದುಪಡಿ ತಂದು 10ನೇ ಪಟ್ಟಿಯನ್ನು ಸೇರಿಸಲಾಗಿತ್ತು. ಒಂದು ಪಕ್ಷದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ನಂತರ ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಕಾನೂನು ಷರತ್ತು ವಿಧಿಸುತ್ತದೆ.

Join Whatsapp