ಸುದೀರ್ಘ 3 ಗಂಟೆ ಬಜೆಟ್ ಭಾಷಣ ಮಾಡಿದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 14ನೇ ಬಾರಿ ಬಜೆಟ್ ಮಂಡನೆ ಮಾಡಿದರು. ಮುಖ್ಯಮಂತ್ರಿಯಾಗಿ ಏಳನೇ ಹಾಗೂ ಒಟ್ಟಾರೆಯಾಗಿ ಹದಿನಾಲ್ಕನೇ ಬಜೆಟ್ ಮಂಡನೆ ಮಾಡಿದ ಅವರು, ಸುದೀರ್ಘ ಬಜೆಟ್ ಭಾಷಣ ಮಾಡಿದರು. ಮಧ್ಯಾಹ್ನ 12 ಗಂಟೆಗೆ ಬಜೆಟ್ ಓದಲು ಆರಂಭಿಸಿದ ಸಿದ್ದರಾಮಯ್ಯ, 3 ಗಂಟೆಗೆ ಸರಿಯಾಗಿ ಭಾಷಣ ಮುಕ್ತಾಯಗೊಳಿಸಿದರು.

- Advertisement -

ಫೆಬ್ರವರಿಯಲ್ಲಿ ಪೂರಕ ಬಜೆಟ್ ಮಂಡನೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 2.40 ಗಂಟೆ ಬಜೆಟ್ ಭಾಷಣ ಓದಿದ್ದರು. ಇದೀಗ ಸಿದ್ದರಾಮಯ್ಯ ಅದನ್ನು ಮೀರಿಸಿದ್ದಾರೆ.

ಈ ಆಯವ್ಯಯವನ್ನು ಸದನದ ಪರಿಗಣನೆಗಾಗಿ ಮಂಡಿಸುತ್ತಿದ್ದೇನೆ. 2024ರ ಮಾರ್ಚ್ 31ರ ವರೆಗಿನ ಲೇಖಾನುದಾನವನ್ನು ಕೋರುತ್ತಿದ್ದೇನೆ. ಜೈ ಹಿಂದ್, ಜೈ ಕರ್ನಾಟಕ ಎಂದು ಸಿದ್ದರಾಮಯ್ಯ ಭಾಷಣ ಮುಗಿಸಿದರು.



Join Whatsapp