TRP ತಿರುಚಲು ಅರ್ನಾಬ್ ಗೋಸ್ವಾಮಿ 12,000 ಡಾಲರ್, 40 ಲಕ್ಷ ರೂ. ನೀಡಿದ್ದರು : ಪಾರ್ಥೊ ದಾಸ್ ಗುಪ್ತಾ

Prasthutha|

ಮುಂಬೈ : ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ತಮಗೆ ದೊಡ್ಡ ಮೊತ್ತದ ಹಣ ನೀಡಿರುವುದನ್ನು ಬಾರ್ಕ್ ಮಾಜಿ ಅಧ್ಯಕ್ಷ ಪಾರ್ಥೊ ದಾಸ್ ಗುಪ್ತಾ ಒಪ್ಪಿಕೊಂಡಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ.

- Advertisement -

ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಪರವಾಗಿ ಟಿಆರ್ ಪಿ ತಿರುಚಲು ಮೂರು ವರ್ಷಗಳಲ್ಲಿ 40 ಲಕ್ಷ ರೂ. ಮತ್ತು ಎರಡು ಪ್ರತ್ಯೇಕ ರಜಾಅವಧಿಗಳಿಗಾಗಿ 12,000 ಡಾಲರ್ ಪಾವತಿಸಲಾಗಿದೆ ಎಂದು ದಾಸ್ ಗುಪ್ತಾ ಹೇಳಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ತಮ್ಮ ಕೈಬರಹದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮುಂಬೈ ಪೊಲೀಸರು ಹಗರಣಕ್ಕೆ ಸಂಬಂಧಿಸಿ 3,600 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ. ಅದರಲ್ಲಿ ಬಾರ್ಕ್ ಫಾರೆನ್ಸಿಕ್ ಆಡಿಟ್ ರಿಪೋರ್ಟ್, ಗೋಸ್ವಾಮಿ ಮತ್ತು ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್, ಬಾರ್ಕ್ ಮಾಜಿ ನೌಕರರು ಮತ್ತು ಕೇಬಲ್ ಆಪರೇಟರ್ ಗಳು ಸೇರಿ 59 ಮಂದಿ ವ್ಯಕ್ತಿಗಳ ಸಾಕ್ಷಿ ಹೇಳಿಕೆಗಳು ಒಳಗೊಂಡಿವೆ.  



Join Whatsapp