ಕನ್ನಡಪರ ಸಂಘಟನೆ, ರೈತರು, ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಚಿವ ಸಂಪುಟ ನಿರ್ಧಾರ

Prasthutha|

ಬೆಂಗಳೂರು: ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ವಿಚಾರಣೆ ಹಂತದಲ್ಲಿರುವ ಕೇಸ್​​ ಗಳನ್ನು​ ಹಿಂಪಡೆಯಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ.

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಸ್​​ಗಳನ್ನು ಹಿಂಪಡೆಯುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್​ ಕೆ ಪಾಟೀಲ್​ ತಿಳಿಸಿದರು. ಕೇಸ್​​ ಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ರಚನೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.



Join Whatsapp