KSRTC-BMTC ಗೆ ನಷ್ಟವಾಗುತ್ತಿಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Prasthutha|

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಯಾವುದೇ ಸಮಸ್ಯೆಗಳು ಸದ್ಯದ ಮಟ್ಟಿಗೆ ಇಲ್ಲ, ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡಲು ಪ್ರಯತ್ನ ಪಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

- Advertisement -

ಈ ಕುರಿತು ಮಾತನಾಡಿರುವ ಅವರು, ಸರ್ಕಾರ ಸಂಬಳ ಕೊಡದಿದ್ದಾಗ ಸಂಬಳ ನೀಡಿಲ್ಲ ಎಂದು ಹೇಳುವುದು ಸರಿ, ಸರ್ಕಾರದಿಂದ ಈಗ ಹಣದ ಸೌಲಭ್ಯ ಸಿಗುತ್ತಿದ್ದು, ಸಾರಿಗೆ ಸಂಸ್ಥೆಯ ಸಂಪನ್ಮೂಲಗಳಿಂದ ಕೂಡ ಹಣ ಸಂಗ್ರಹವಾಗುತ್ತಿದೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಸಂಸ್ಥೆಗೆ ಯಾವುದೇ ರೀತಿಯಾದ ಸಂಕಷ್ಟಗಳು ತಲೆದೂರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಸಾರಿಗೆ ಸಂಸ್ಥೆಯಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಾರಿಗೆ ಇಲಾಖೆ ನಷ್ಟದ ಹಾದಿಯನ್ನು ಹಿಡಿದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಎಂಬ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು.. ಇಲ್ಲಿ ನಷ್ಟ ಎಂಬುದು ಇಲ್ಲವೇ ಇಲ್ಲ ಮಹಿಳೆಯರ ಉಚಿತ ಪ್ರಯಾಣಕ್ಕೆ ನಮ್ಮ ಸರ್ಕಾರ ಅನುವು ಮಾಡಿಕೊಟ್ಟಿದೆ ಯಾವುದೇ ನಷ್ಟದ ಪ್ರಮೇಯ ಇಲ್ಲಿ ಬರುವುದಿಲ್ಲ ಅಂತ ಹೇಳಿದ್ದಾರೆ.



Join Whatsapp