ನೆಹರೂ ಮ್ಯೂಸಿಯಂ ಮರುನಾಮಕರಣ, ಬಿಜೆಪಿ ಇತಿಹಾಸವನ್ನು ನಾಶ ಮಾಡುತ್ತಿದೆ: ಸಂಜಯ್ ರಾವುತ್

Prasthutha|

ಮುಂಬೈ: ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯನ್ನು ಮರುನಾಮಕರಣ ಮಾಡುವ ಮೂಲಕ ಬಿಜೆಪಿ ಇತಿಹಾಸವನ್ನು ನಾಶ ಮಾಡುತ್ತಿದೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -


ಬಿಜೆಪಿ ನೇತೃತ್ವದ ಕೇಂದ್ರವು ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ.


ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾವುತ್, ಇತರ ಪ್ರಧಾನಿಗಳ ಕೊಡುಗೆಯನ್ನು ತೋರಿಸಬೇಕು ಎಂದು ನಾನು ಒಪ್ಪುತ್ತೇನೆ. ಇತರ ಪ್ರಧಾನಿಗಳ ಕೊಡುಗೆಗಳನ್ನು ಪ್ರದರ್ಶಿಸಬಹುದಾದ ಬೇರೆ ವಿಭಾಗವನ್ನು ಮಾಡಬಹುದು, ಆದರೆ ಈಗ ಇರುವ ಮ್ಯೂಸಿಯಂ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದರು.



Join Whatsapp