ಬೊಮ್ಮಾಯಿಯವರೇ ಸುಳ್ಳು ಹೇಳುವುದನ್ನು ಮೋದಿಯಿಂದ ಕಲಿತಿರಾ: ಕಾಂಗ್ರೆಸ್ ಪ್ರಶ್ನೆ

Prasthutha|

ಬೆಂಗಳೂರು: ಸುಳ್ಳು ಹೇಳುವುದು ಮೋದಿಯವರಿಂದ ಕಲಿತಿರಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

- Advertisement -


ವಿದ್ಯುತ್ ಬಿಲ್ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು ಕಾಂಗ್ರೆಸ್ ಸರ್ಕಾರ ಎನ್ನುವ ಬೊಮ್ಮಾಯಿವರ ಹೇಳಿಕೆಗೆ ಕಾಂಗ್ರೆಸ್ ಈ ರೀತಿ ಹೇಳಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ದರ ಏರಿಕೆ ಜಾರಿಯಾಗಿದ್ದು, ಮೇ 12ನೇ ತಾರೀಕು, ಆಗ ನಮ್ಮ ಸರ್ಕಾರ ರಚನೆಯಾಗಿತ್ತಾ? ಎಂದು ಪ್ರಶ್ನೆ ಮಾಡಿದೆ.
‘ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು ನಾವಲ್ಲ ಕಾಂಗ್ರೆಸ್ ಸರ್ಕಾರ” ಎಂದಿರುವ ಬಸವರಾಜ್ ಬೊಮ್ಮಾಯಿಯವರೇ, ದರ ಏರಿಕೆ ಜಾರಿಯಾಗಿದ್ದು ಮೇ 12ನೇ ತಾರೀಕು, ಆಗ ನಮ್ಮ ಸರ್ಕಾರ ರಚನೆಯಾಗಿತ್ತಾ? ಹಿಂದಿನ ಸರ್ಕಾರದ ಅನುಮತಿ ಇಲ್ಲದೆ KERC ದರ ಏರಿಸಲು ಹೇಗೆ ಸಾಧ್ಯ? ಇಷ್ಟೊಂದು ಸುಳ್ಳು ಹೇಳುವುದನ್ನು ಮೋದಿಯವರಿಂದ ಕಲಿತಿರಾ?‘ ಎಂದು ಹೇಳಿದೆ.

- Advertisement -



Join Whatsapp