ಬಿಜೆಪಿ- ಕಾಂಗ್ರೆಸ್ ನಾಯಕರ ಹೊಂದಾಣಿಕೆ ರಾಜಕಾರಣ ಎಂದ ಸಂಸದ ಪ್ರತಾಪಸಿಂಹ

Prasthutha|

ಮೈಸೂರು: ಕಾಂಗ್ರೆಸ್–ಬಿಜೆಪಿಯ ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

- Advertisement -


ಅಲ್ಲದೆ, ಬಿಜೆಪಿ ಸರ್ಕಾರದ ಮೇಲಿನ ಎಲ್ಲ ಆರೋಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು (ಬಿಜೆಪಿ) ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಏನಾದರೂ ಮಾತನಾಡಿದರೆ ಅರ್ಕಾವತಿ ಹಗರಣ, ರೀಡೂ, ಡಿನೋಟಿಫಿಕೇಶನ್ ಎಂದು ಹೆದರಿಸಿದ್ದೇ ಆಯಿತು. ಆದರೆ ಒಂದು ದಿನವೂ ಕೆಂಪಣ್ಣ ಆಯೋಗದ ವರದಿ, ಅರ್ಕಾವತಿ ಹಗರಣದ ತನಿಖೆ ಮಾಡಲಿಲ್ಲ. ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷವು ಬಿಟ್ ಕಾಯಿನ್, ಶೇ 40 ಕಮಿಷನ್, ಪಿಎಸ್ಐ ಹಗರಣ ಎಂದು ದೂರಿತು. ಈಗ ಅವರದ್ದೇ ಸರ್ಕಾರ ಇದೆ. ಈ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದರೆ ಸಿದ್ದರಾಮಯ್ಯ ಅವರ ಪಾದಪೂಜೆ ಮಾಡುತ್ತೇನೆ’ ಎಂದರು.




Join Whatsapp