ಪುಣೆ : ವಿಮೆನ್ ಇಂಡಿಯಾ ಮೂವ್ ಮೆಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಎರಡು ದಿನಗಳ ಸಭೆ ಜೂನ್ 10 ಮತ್ತು 11 ರಂದು ಪುಣೆಯಲ್ಲಿ ನಡೆದಿದ್ದು, ಸಭೆಯ ಅಧ್ಯಕ್ಷತೆಯನ್ನು WIM ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ವಹಿಸಿದ್ದರು ಮತ್ತು ಇತರ ಸದಸ್ಯರು ಹಾಜರಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫ್ಶಾನ್ ಅಜೀಜ್ ಸಭೆಯನ್ನು ನಿರ್ವಹಿಸಿದರು. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು.
2016-2022ರ ಅವಧಿಯಲ್ಲಿ ದೇಶದಲ್ಲಿ 22.8 ಲಕ್ಷ ಅತ್ಯಾಚಾರ ಮತ್ತು ಕೊಲೆ, ಕೆಲಸದ ಸ್ಥಳಗಳಲ್ಲಿ ಶೋಷಣೆ, ಲಿಂಗ ತಾರತಮ್ಯ ಮತ್ತು ಕೌಟುಂಬಿಕ ಹಿಂಸಾಚಾರದ ಅಪರಾಧಗಳು ವರದಿಯಾಗಿವೆ ಎಂದು ಸರ್ಕಾರಿ ದಾಖಲೆಗಳು ತೋರಿಸುತ್ತಿವೆ. ಅದರಲ್ಲಿ 30% ಗಂಡ/ಮಾವಂದಿರ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. ಮಹಿಳೆಯರ ಸುರಕ್ಷತೆ ಮತ್ತು ಘನತೆಯಿಂದ ಬದುಕುವ ಅವರ ಹಕ್ಕನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು NWC ಒತ್ತಾಯಿಸುತ್ತದೆ. ಮಹಿಳೆಯರ ಹಕ್ಕುಗಳು ಮತ್ತು ಗೌರವವನ್ನು ರಕ್ಷಿಸುವ ವಿಚಾರದಲ್ಲಿ WIM ಜನರಲ್ಲಿ ಜಾಗೃತಿ ಮುಡಿಸಲು ಶ್ರಮಿಸಲಿದೆ ಎಂದರು.
ಮಣಿಪುರ ಹಿಂಸಾಚಾರ ಆ ರಾಜ್ಯದ ಮಹಿಳೆಯರು ಮತ್ತು ಮಕ್ಕಳ ಜೀವನದ ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆಯೂ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಹಿಂಸಾಚಾರದ ಹಿಂದಿನ ಸಂಚುಕೋರರನ್ನು ಸರ್ಕಾರ ತನಿಖೆ ಮೂಲಕ ಪತ್ತೆಹಚ್ಚಬೇಕು ಮತ್ತು ತಪ್ಪಿತಸ್ಥರ ವಿತುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಸಭೆ ಅಂಗೀಕರಿಸಿತು. ಸ್ಥಳಾಂತರಗೊಂಡ ಜನರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರಿಗೆ ಆಹಾರ, ಬಟ್ಟೆ ಮತ್ತು ವಸತಿಯೊಂದಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದೂ ಸಭೆಯಲ್ಲಿ ಅಗ್ರಹಿಸಲಾಯಿತು.
ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿರುವ ಸರ್ಕಾರದ ನಿರಂಕುಶ ವರ್ತನೆಯ ಬಗ್ಗೆ ರಾಷ್ಟ್ರೀಯ ಸಮಿತಿ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಸಾಂವಿಧಾನಿಕ ರೀತಿಯಲ್ಲಿ ನ್ಯಾಯವನ್ನು ಕೋರುವ ಕುಸ್ತಿಪಟುಗಳ ಮೇಲೆ ಇತ್ತೀಚಿನ ದಾಳಿಗಳು ಮತ್ತು WFI ಅಧ್ಯಕ್ಷರ ಪರೋಕ್ಷ ರಕ್ಷಣೆ; ಬುಲ್ಡೋಜರ್ ರಾಜಕೀಯ; ಬ್ರಿಟಿಷರು ಮಾಡಿದ 153 ವರ್ಷಗಳ ಹಿಂದಿನ ದೇಶದ್ರೋಹ ಕಾನೂನುಗಳನ್ನು ಬೆಂಬಲಿಸುವುದು; ಮತ್ತು ಕಾನೂನುಗಳ ವ್ಯಾಪ್ತಿಯನ್ನು ವಿಫಲಗೊಳಿಸುವ ರೀತಿಯಲ್ಲಿ ವಿರೋಧ ಪಕ್ಷದ ಸಂಸದರನ್ನು ಅನರ್ಹಗೊಳಿಸುವುದು ಇವೆಲ್ಲವೂ ಸರ್ವೋಚ್ಚ ಕಾನೂನು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅವನತಿಗೆ ಅಗೌರವದ ಬಗ್ಗೆ ವಿವರಿಸುತ್ತವೆ ಎಂದರು.
WIM ಸರ್ಕಾರದ ದೌರ್ಜನ್ಯದ ವಿರುದ್ಧ ಹೋರಾಡಲು ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ನಿರ್ಧರಿಸಿದೆ.
ಸಭೆಯಲ್ಲಿ ಯಾಸ್ಮಿನ್ ಫಾರೂಕಿ, ಯಾಸ್ಮಿನ್ ಇಸ್ಲಾಂ, ಅಫ್ಶಾನ್ ಅಜೀಜ್, ರೈಹಾನಾತ್ ಟೀಚರ್, ಅಡ್ವಕೇಟ್ ಖಲೀಧಾ, ಅಡ್ವಕೇಟ್ ಲಕ್ಷ್ಮಿ ರಾಜಾ, ಅಡ್ವಕೇಟ್ ಸಫಿಯಾ, ಕುಮ್ ಕುಮ್ ಬೆನ್, ನೂರ್ಜಹಾನ್, ಸಿಮಿ ಜಾಕೋಬ್, ಮೆಹರುನಿಸಾ ಖಾನ್, ಆಲಿಯಾ ಪರ್ವೀನ್, ರುನಾ ಲೈಲಾ, ಅತಿಯಾ ಫಿರ್ದೌಸ್, ಫರೀದಾ ಗಜದಾರ ಉಪಸ್ಥಿತರಿದ್ದರು.