ತುಮಕೂರು: ನಮ್ಮ ಸರ್ಕಾರ ಕರೆಂಟ್ ಬಿಲ್ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ವಿದ್ಯುತ್ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರೆಂಟ್ ಬಿಲ್ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್ ಕಟ್ಟಬೇಕು . ಹಿಂದಿನ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದ್ದು ಅದರ ಬಿಲ್ ಈಗ ಬಂದಿದೆ ಎಂದು ಡಾ.ಜಿ ಪರಮೇಶ್ವರ್ ಹೇಳಿದರು .
ಗ್ಯಾರಂಟಿ ಕಾರ್ಡ್ ನಲ್ಲಿದ್ದ ಎಲ್ಲಾ ಯೋಜನೆಗಳನ್ನು ನಾವು ಜಾರಿ ಮಾಡುತ್ತೇವೆ, ಎಲ್ಲಾ ಯೋಜನೆಗಳು ಮುಂದುವರಿಯುತ್ತಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಹೇಳಿದರು.