ಬಿಪರ್ಜೋಯ್ ಚಂಡಮಾರುತ ಎಫೆಕ್ಟ್: ಕರಾವಳಿ ಕಡಲ ತೀರಗಳಲ್ಲಿ ಅಲೆಗಳ ಅಬ್ಬರ

Prasthutha|

ಮಂಗಳೂರು: ಬಿಪರ್ಜೋಯ್ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.

- Advertisement -


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮಳೆ ಯಾಗಿದ್ದು, ಪ್ರಕ್ಷುಬ್ಧಗೊಂಡಿದೆ. ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮುದ್ರ ತೀರಕ್ಕೆ ಜನರು ಹೋಗದಂತೆ ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಗಂಟೆಗೆ 40-50ಕೀಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಣಿಯನ್ನು ಕೂಡ ಜಿಲ್ಲಾಡಳಿತ ತೆರೆದಿದೆ.



Join Whatsapp