ಹೊಸದಿಲ್ಲಿ: ಎಐಎಡಿಎಂಕೆಯ ಮಾಜಿ ಸಂಸದ ಡಾ.ವಿ ಮೈತ್ರೇಯನ್ ಅವರು ಶುಕ್ರವಾರ (ಜೂನ್ 9) ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಪಕ್ಷದ ದೆಹಲಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ನಾಯಕ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ರಾಜಕೀಯ ಜೀವನದ ಆರಂಭದಿಂದಲೂ RSS ಸದಸ್ಯರಾಗಿದ್ದ ಮೈತ್ರೇಯನ್ ಅವರು 1991 ರಲ್ಲಿ ಬಿಜೆಪಿ ತಮಿಳುನಾಡು ಘಟಕದ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. 1995 ರಿಂದ 1997 ರವರೆಗೆ ಬಿಜೆಪಿಯ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, 1997 ರಿಂದ 1999 ರವರೆಗೆ ಉಪಾಧ್ಯಕ್ಷರಾಗಿ ಮತ್ತು 1999 ರಿಂದ 2000 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2000 ರಲ್ಲಿ ಅವರು ಬಿಜೆಪಿಗೆ ರಾಜೀನಾಮೆ ನೀಡಿ AIADMK ಗೆ ಸೇರಿದ್ದರು. 2022 ರಲ್ಲಿ ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿತರಾಗಿದ್ದರು.