ಮಂಗಳೂರು: ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಆಲಂಪಾಡಿ ಎಂಬಲ್ಲಿ ಇಂದು ಸಂಭವಿಸಿದೆ.
ಮೃತ ಯುವಕನನ್ನು ಬೋಳಿಯಾರು ನಿವಾಸಿ ಇಬ್ರಾಹೀಮ್ ರವರ ಮಗ ಶಾಫಿ (29) ಎಂದು ಗುರುತಿಸಲಾಗಿದೆ.
ಶಾಫಿ ಇಂದು ಬೆಳಿಗ್ಗೆ ಆಲಂಪಾಡಿಯಲ್ಲಿ ಅಡಿಕೆ ತೆಗೆಯಲೆಂದು ಹೋಗಿದ್ದು, ಈ ಸಂದರ್ಭ ಅವರ ಕೈಯಲ್ಲಿದ್ದ ಅಡಿಕೆ ತೆಗೆಯುವ ಕೋಲು ಸರ್ವಿಸ್ ವಯರ್ ಗೆ ತಾಗಿ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ ಶಾಫಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಎಸ್.ಡಿ.ಪಿ.ಐ ಸಕ್ರೀಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.