16,000ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೃದಯಾಘಾತದಿಂದ ಸಾವು

Prasthutha|

ಗಾಂಧೀನಗರ: 16,000ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ 41 ವರ್ಷದ ಹೃದ್ರೋಗ ತಜ್ಞನೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಜಾಮ್ನಗರದಲ್ಲಿ ನಡೆದಿದೆ.

- Advertisement -


ಜಾಮ್ನಗರದ ಖ್ಯಾತ ಹೃದ್ರೋಗ ತಜ್ಞ ಡಾ. ಗೌರವ್ ಗಾಂಧಿ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಾವು ನಗರದಾದ್ಯಂತ ಆಘಾತ ತಂದಿದೆ. ಏಕೆಂದರೆ ಗೌರವ್ ಅವರು ಅಲ್ಲಿನ ಅತ್ಯುತ್ತಮ ಮತ್ತು ಕಿರಿಯ ಹೃದ್ರೋಗ ತಜ್ಞರಲ್ಲಿ ಒಬ್ಬರಾಗಿದ್ದರು ಎನ್ನಲಾಗಿದೆ.


ಗೌರವ್ ಎಂದಿನಂತೆ ಸೋಮವಾರವೂ ಕೆಲವು ರೋಗಿಗಳನ್ನು ಭೇಟಿಯಾಗಿ, ಬಳಿಕ ತಮ್ಮ ಮನೆಗೆ ಮರಳಿ ನಿದ್ರೆಗೆ ಜಾರಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

- Advertisement -


ಜಾಮ್ ನಗರದಲ್ಲಿ ಎಂಬಿಬಿಎಸ್ ಮತ್ತು ಎಂಡಿ ವ್ಯಾಸಂಗ ಮಾಡಿದ್ದ ಡಾ. ಗೌರವ್ ಗಾಂಧಿ, ಅಲ್ಲಿಯೇ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಗುಣಮಟ್ಟದ ವೈದ್ಯಕೀಯ ಸೇವೆಯಿಂದ ಖ್ಯಾತಿ ಗಳಿಸಿದ್ದರು. ವೈದ್ಯಕೀಯ ಸೇವೆ ಮತ್ತು ಸಂಶೋಧನೆಗಳಿಗಾಗಿ ಅವರನ್ನು ಗಣರಾಜ್ಯೋತ್ಸವದಂದು ಗೌರವಿಸಲಾಗಿತ್ತು. ʼಹಾಲ್ಟ್ ಹಾರ್ಟ್ ಅಟ್ಯಾಕ್ʼ ಎಂಬ ಅಭಿಯಾನದಲ್ಲಿ ಅವರು ಭಾಗಿಯಾಗಿ ಹೃದಯಾಘಾತದಿಂದ ಪಾರಾಗುವ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು.



Join Whatsapp