ದೆಹಲಿ: ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಸಭೆಯನ್ನು ಇಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಮುಂದೆ ಕುಸ್ತಿಪಟುಗಳ 5 ಬೇಡಿಕೆಗಳನ್ನು ಇಟ್ಟಿದ್ದಾರೆ, ಅದರಲ್ಲಿ ಒಂದು ಮಹಿಳಾ ಫೆಡರೇಶನ್ ಮುಖ್ಯಸ್ಥರು ಬೇಕು ಎಂದು ಹೇಳಿದ್ದಾರೆ.
ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರು ಇಂದು ಕ್ರೀಡಾ ಸಚಿವರ ಮನೆಯಲ್ಲಿ ಮಾತುಕತೆ ನಡೆಸಿದರು. ಐದು ದಿನಗಳಲ್ಲಿ ಕುಸ್ತಿಪಟುಗಳು ಮತ್ತು ಸರ್ಕಾರದ ನಡುವೆ ನಡೆದ ಎರಡನೇ ಸಭೆಯಾಗಿದೆ. ಭಾರತ ಕುಸ್ತಿ ಒಕ್ಕೂಟಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಸಚಿವರಿಗೆ ಸಲ್ಲಿಸಿದರು.