‘ಕುಕಿ’ ಸಮುದಾಯವನ್ನು ಉಳಿಸಿ: ಅಮಿತ್ ಶಾ ನಿವಾಸದ ಎದುರು ಪ್ರತಿಭಟನೆ

Prasthutha|

ನವದೆಹಲಿ: ಮಣಿಪುರದಿಂದ ಆಗಮಿಸಿರುವ ಕುಕಿ ಸಮುದಾಯದ ಜನರು ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದೆದುರು ಪ್ರತಿಭಟನೆ ನಡೆಸಿದರು. ‘ಕುಕಿ ಸಮುದಾಯವನ್ನು ಉಳಿಸಿ’ ಎಂಬ ಭಿತ್ತಿ ಪತ್ರಗಳನ್ನು ಹಿಡಿದ ಜನರು ಘೋಷಣೆಗಳನ್ನು ಕೂಗಿದ್ದಾರೆ.

- Advertisement -

“ಶಾಂತಿ ಮರುಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ ಹೊರತಾಗಿಯೂ, ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರಿದಿವೆ. ಇಲ್ಲಿ ಜೀವಗಳು ಅಪಾಯದಲ್ಲಿವೆ. ಗೃಹ ಸಚಿವರು ಹಾಗೂ ಪ್ರಧಾನಿ ಮೋದಿ ಮಾತ್ರ ನಮಗೆ ಸಹಾಯ ಮಾಡಬಹುದು” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.


ಗೃಹ ಸಚಿವರ ಜೊತೆ ಮಾತುಕತೆ ನಡೆಸಲು ನಾಲ್ವರನ್ನು ಮಾತ್ರ ಒಳಗೆ ಬಿಡಲಾಗಿದ್ದು, ಉಳಿದವರನ್ನು ಜಂತರ್ ಮಂತರ್ ಗೆ ಕಳುಹಿಸಲಾಗಿದೆ.

- Advertisement -


ಮಣಿಪುರದಲ್ಲಿ ಒಂದು ತಿಂಗಳ ಹಿಂದೆ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 98 ಜನರು ಸಾವಿಗೀಡಾಗಿದ್ದು, 310 ಜನರು ಗಾಯಗೊಂಡಿದ್ದಾರೆ. 272 ಪರಿಹಾರ ಶಿಬಿರಗಳಲ್ಲಿ ಒಟ್ಟು 37,450 ಜನರು ಆಶ್ರಯ ಪಡೆದಿದ್ದಾರೆ.



Join Whatsapp