NEP ರದ್ದುಗೊಳಿಸುವ ಬಗ್ಗೆ ನಿರ್ಧಾರ ಮುಂದೆ ಕೈಗೊಳ್ಳಲಾಗುವುದು: ಸಚಿವ ಎಂಸಿ ಸುಧಾಕರ್

Prasthutha|

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ.

- Advertisement -

ರಾಜ್ಯ ಪಠ್ಯಕ್ರಮ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡುತ್ತೇವೆ. ಮಕ್ಕಳ ಶೈಕ್ಷಣಿಕ, ಭವಿಷ್ಯ ದೃಷ್ಟಿಯಿಂದ ಪರ, ವಿರೋಧ ಎರಡೂ ಇದೆ‌. ನಾವು ಅಳೆದು ತೂಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹಿರಿಯರಾದ ನಿರಂಜನ್ ಆರಾಧ್ಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ NEP ಸಾಧಕ, ಬಾಧಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ನಿರ್ಧಾರ ಮಾಡಲಾಗಿದೆ. ಇದರ ಭಾಗವಾಗಿ ಹಿರಿಯರ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದರು.

- Advertisement -

ಎನ್​ಇಪಿ ಬಗ್ಗೆ ಸಭೆ ಮಾಡಿದಾಗ ಯಾರೆಲ್ಲಾ ಭಾಗಿಯಾಗಿದ್ದರೋ ಅವರ ಜೊತೆ ಚರ್ಚೆ ನಡೆಸಲಾಗುವುದು. ಕುಲಪತಿ ಹಾಗೂ ನಿವೃತ್ತ ಉಪಕುಲಪತಿಗಳ ನಿಯೋಗ ಬಂದಿತ್ತು, ಅವರ ಅಭಿಪ್ರಾಯ ಪಡೆಯುತ್ತೇವೆ. ಈಗಾಗಲೇ ಎನ್‌ಇಪಿ ಜಾರಿಯಾಗಿ ಒಂದು ವರ್ಷವಾಗಿದೆ. ಮೂಲಭೂತವಾಗಿ ಇಷ್ಟು ಬೇಗ ಅನುಷ್ಠಾನಕ್ಕೆ ತರುವ ಅವಶ್ಯಕತೆ ಇತ್ತಾ? ಈ ಸಂಬಂಧ ಪ್ರಾಧ್ಯಾಪಕರ ಬಳಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದರು.

ವಿಕಾಸಸೌಧದಲ್ಲಿ ಇಂದು ಸಚಿವ ಸುಧಾಕರ್ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಭೆ ನಡೆಸಲಾಯಿತು. ಈ ವೇಳೆ ಎನ್​ಇಪಿ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಕಲೆಹಾಕಿದ ಸಚಿವರು, ಚರ್ಚೆಯೂ ನಡೆಸಿದರು. ಅದರಂತೆ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು ನಿರ್ಧರಿಸಲಾಯಿತು. ಅಲ್ಲದೆ, ಹಿರಿಯ ಸಭೆ ಕರೆದು ಚರ್ಚಿಸಲು ತೀರ್ಮಾನಿಸಲಾಯಿತು.



Join Whatsapp