ಮಂಗಳೂರು: ಎರಡು ದಿನ ಕರಾವಳಿ ಪ್ರವಾಸದಲ್ಲಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರು ಇಂದು ಮಂಗಳೂರಿನ ಐಜಿಪಿ ಕಚೇರಿಗೆ ಆಗಮಿಸಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ್ದಾರೆ.
ಗೃಹ ಸಚಿವರಾದ ಬಳಿಕ ಡಾ.ಜಿ.ಪರಮೇಶ್ವರ್ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಕಮಿಷನರ್ ಕುಲದೀಪ್ ಜೈನ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು.
ಈ ವೇಳೆ ದ.ಕ ಎಸ್ಪಿ ರಿಷ್ಯಂತ್, ಉಡುಪಿ ಎಸ್ಪಿ ಅಕ್ಷಯ್, ಉ.ಕ ಎಸ್ಪಿ ವಿಷ್ಣುವರ್ಧನ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.