ನವದೆಹಲಿ: ಗುಜರಾತ್ ಟೈಟಾನ್ಸ್ ಎಡಗೈ ವೇಗಿ ಯಶ್ ದಯಾಳ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ವಿವಾದಾತ್ಮಕ ಸ್ಟೋರಿ ಹಂಚಿ ವಿವಾದಕ್ಕೆ ಸಿಲುಕಿದ್ದಾರೆ.
ಒಂದು ನಿರ್ದಿಷ್ಟ ಸಮುದಾಯವನ್ನು ದೂಷಿಸುವ ಹಾಗೂ ಲವ್ ಜಿಹಾದ್ ಕುರಿತಾದ ವ್ಯಂಗ್ಯಚಿತ್ರವನ್ನು ದಯಾಳ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಲಾಗಿತ್ತು. ತಕ್ಷಣವೇ ಅದನ್ನು ಡಿಲಿಟ್ ಮಾಡಲಾಗಿತ್ತಾದರೂ, ಅದರ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದರ ಬೆನ್ನಲ್ಲೇ ಮತ್ತೊಂದು ಸ್ಟೋರಿ ಹಾಕಿದ ದಯಾಳ್, “ಇಂದು ನನ್ನ ಇನ್ಸ್ಟಾ ಹ್ಯಾಂಡಲ್ ನಲ್ಲಿ ಎರಡು ಕಥೆಗಳನ್ನು ಪೋಸ್ಟ್ ಮಾಡಲಾಗಿದೆ – ಇವೆರಡನ್ನೂ ನಾನು ಮಾಡಿಲ್ಲ. ನನ್ನ ಖಾತೆಯನ್ನು ಬೇರೊಬ್ಬರು ಪ್ರವೇಶಿಸುತ್ತಿದ್ದಾರೆ ಮತ್ತು ಪೋಸ್ಟ್ ಮಾಡಲು ಬಳಸುತ್ತಿದ್ದಾರೆ ಎಂದು ನಾನು ನಂಬಿರುವುದರಿಂದ ನಾನು ಈ ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಿದ್ದೇನೆ. ನನ್ನ ಇನ್ಸ್ಟಾಗ್ರಾಮ್ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆಯಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಎಲ್ಲಾ ಸಮುದಾಯಗಳನ್ನು ಗೌರವಿಸುತ್ತೇನೆ ಮತ್ತು ಇಂದು ಹಂಚಿಕೊಂಡ ಚಿತ್ರವು ನನ್ನ ನಿಜವಾದ ನಂಬಿಕೆಗಳನ್ನು ಬಹಿರಂಗಪಡಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಕ್ಷಮೆಯಾಚಿಸಿದ ಅವರು “ದ್ವೇಷವನ್ನು ಹರಡಬೇಡಿ, ಪ್ರೀತಿಯನ್ನು ಹರಡಿ. ನಾನು ಪ್ರತಿ ಸಮಾಜ, ಸಮುದಾಯವನ್ನು ಗೌರವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.