ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಬೆಂಗಳೂರು: ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

- Advertisement -

ಪುಸ್ತಕ ಪ್ರಕಾಶಕರ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕನ್ನಡದ ಪ್ರಕಾಶಕರು ಹಾಗೂ ಬರಹಗಾರರ ಸ್ಥಿತಿ ಕಷ್ಟಕರವಾಗಿದ್ದು, ಜ್ಞಾನಭಾಗ್ಯವನ್ನು ನೀಡಬೇಕೆಂದು ನಿಯೋಗ ಕೋರಿತು. ಬಿಬಿಎಂಪಿ ವತಿಯಿಂದ 600 ಕೋಟಿ ರೂ.ಗಳು ಸೆಸ್ ಬಾಕಿ ಇದೆ. ಗ್ರಂಥಾಲಯಗಳ ಶೇ 6 ರಷ್ಟು ಸೆಸ್ ಮೊತ್ತವನ್ನು ಸಂಗ್ರಹ ಮಾಡುತ್ತಿದ್ದು, ಅದನ್ನು ಗ್ರಂಥಾಲಯ ಲೆಕ್ಕಶೀರ್ಷಿಕೆಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.

- Advertisement -

ನಿಯೋಗದಲ್ಲಿ ಸಪ್ನಾ ಬುಕ್ ಹೌಸ್, ನಿರಂತರ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಸೇರಿದಂತೆ ಹಲವು ಪ್ರಕಾಶನ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.



Join Whatsapp