ಇಸ್ತಾಂಬುಲ್ : ಟರ್ಕಿಯ ಅಧ್ಯಕ್ಷರಾಗಿ ರಿಸೆಪ್ ತಯ್ಯಿಪ್ ಎರ್ದೋಗಾನ್ ಅವರು ಭಾನುವಾರ ಮತ್ತೊಂದು ಅವಧಿಗೆ ಮರು ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಸರ್ವಾಧಿಕಾರದ ಆಡಳಿತ ಮೂರನೇ ದಶಕಕ್ಕೆ ವಿಸ್ತರಣೆಯಾಗಿದೆ.
ಭಾನುವಾರ ಶೇ.99ರಷ್ಟು ಮತಪೆಟ್ಟಿಗೆಗಳನ್ನು ಓಪನ್ ಮಾಡಲಾಗಿದೆ. ಎರ್ದೋಗಾನ್ ಅವರು ಶೇ.52ರಷ್ಟು ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪ್ರತಿಸ್ಪರ್ಧಿ ಕೆಮಾಲ್ ಕುಲ್ಚದಾರೆಲೋ ಶೇ.48 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದ್ದಾರೆ. ಈ ಮಧ್ಯೆ, ಟರ್ಕಿಯ ಚುನಾವಣಾ ಸಂಸ್ಥೆಯ ಎರ್ದೋಗಾನ್ ಅವರ ಗೆಲುವನ್ನು ಖಚಿತಪಡಿಸಿದೆ. ತಮ್ಮ ಐತಿಹಾಸಿಕ ಗೆಲುವಿನ ನಂತರ ಪ್ರತಿಕ್ರಿಯಿಸಿದ ಎರ್ದೋಗಾನ್, ದೇಶ ಈ ವರ್ಷ ತನ್ನ ಸ್ಥಾಪನೆಯ ದ್ವಿಶತಮಾನೋತ್ಸವ ಆಚರಿಸುವ ಸಂದರ್ಭ ಅದರ ಪ್ರಗತಿಗೆ ಶ್ರಮಿಸುವ ಭರವಸೆ ನೀಡಿದರು.