ವಿಧಾನಸಭೆ ಪ್ರವೇಶಿಸಿದ ಮುಸ್ಲಿಮ್ ಶಾಸಕರೆಷ್ಟು? ಇಲ್ಲಿದೆ ವಿವರ

Prasthutha|

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ 113ನ್ನೂ ಮೀರಿ 136 ಕ್ಷೇತ್ರಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತವನ್ನು ಪಡೆದಿದೆ.

- Advertisement -

ಈ ಬಾರಿ ಒಟ್ಟು 14 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, 9ಮಂದಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರ ಚುನಾವಣೆಯಲ್ಲಿ ವಿಧಾನಸಭೆಗೆ 7 ಮುಸ್ಲಿಮ್ ಶಾಸಕರು ಆಯ್ಕೆಯಾಗಿದ್ದರು. ಈ ಬಾರಿ ಎರಡು ಸ್ಥಾನಗಳು ಹೆಚ್ಚಾಗಿವೆ.  

ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ ಮುಸ್ಲಿಮ್ ಶಾಸಕರ ವಿವರ ಇಲ್ಲಿದೆ.

- Advertisement -

ಬೆಳಗಾವಿ ಉತ್ತರದಿಂದ ಆಸೀಫ್ ಸೇಠ್, ಕಲಬುರಗಿ ಉತ್ತರ ಕ್ಷೇತ್ರದಿಂದ ಕನೀಝ್ ಫಾತಿಮಾ, ಬೀದರ್ ಕ್ಷೇತ್ರದಿಂದ ರಹೀಮ್ ಖಾನ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ರಿಝ್ವಾನ್ ಅರ್ಷದ್, ಶಾಂತಿನಗರದಿಂದ ಎನ್. ಎ ಹ್ಯಾರಿಸ್, ಚಾಮರಾಜಪೇಟೆ ಕ್ಷೇತ್ರದಿಂದ ಝಮೀರ್ ಅಹ್ಮದ್, ರಾಮನಗರದಿಂದ ಇಕ್ಬಾಲ್ ಹುಸೇನ್, ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಯು.ಟಿ. ಖಾದರ್, ನರಸಿಂಹರಾಜ ಕ್ಷೇತ್ರದಿಂದ ತನ್ವೀರ್  ಸೇಠ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.



Join Whatsapp