ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆ; ವ್ಯಾಪಕ ಪ್ರಶಂಸೆ

Prasthutha|

ಬೆಂಗಳೂರು: ಗದಗದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.  

- Advertisement -

ಉನ್ನತ ಪೊಲೀಸ್ ಅಧಿಕಾರಿಗಳು, ರಾಜಕೀಯ ನೇತಾರರು ಕೂಡ ಕಾನ್‌ಸ್ಟೆಬಲ್ ಅಶೋಕ್ ಅವರ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.  

ಅಶೋಕ್ ಅವರ ತಾಯಿ ಶಂಕರವ್ವ (80) ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ ನಂತರ ಅಶೋಕ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

- Advertisement -

ಕರ್ನಾಟಕದ ಐಜಿಪಿ ಪ್ರವೀಣ್ ಸೂದ್ ಅವರು ಪೊಲೀಸ್ ಕಾನ್‌ಸ್ಟೆಬಲ್ ಅವರ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದು, “ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅವರ ತಾಯಿ ನಿಧನರಾದರು. ರಜೆಯ ಮೇಲೆ ಮುಂದುವರಿಯಲು ಅವರಿಗೆ ಸೂಚಿಸಲಾಯಿತು. ಆದರೆ ಅವರು ಹೋಗಲು ನಿರಾಕರಿಸಿದರು. ಮೊದಲು ಕರ್ತವ್ಯ ಎಂದರು. ಅವರ ಬಗ್ಗೆ ಹೆಮ್ಮೆಪಡುತ್ತೇನೆ. ಕರ್ತವ್ಯದ ಬದ್ಧತೆಗಾಗಿ ಅವರ ಸಹೋದ್ಯೋಗಿಗಳು ಅವರನ್ನು ಅಭಿನಂದಿಸಿದರು” ಎಂದು ಉಲ್ಲೇಖಿಸಿದ್ದಾರೆ.

“ದುಃಖದ ಕ್ಷಣಗಳಲ್ಲಿ ಕುಟುಂಬದೊಂದಿಗೆ ಉಳಿಯುವುದು ಹೆಚ್ಚು ಮುಖ್ಯವಾಗಿದೆ. ತಾಯಿಯ ಅಂತ್ಯಸಂಸ್ಕಾರದ ನಂತರ, ಅವರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾದರು. ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆಯ ಬಗ್ಗೆ ಹೆಮ್ಮೆ ಇದೆ. ಅಂತ್ಯಸಂಸ್ಕಾರದ ನಂತರದ ಧಾರ್ಮಿಕ ವಿಧಿಗಳಿಗೆ ಹಾಜರಾಗಲು ಅವರಿಗೆ ರಜೆ ಮಂಜೂರು ಮಾಡಲಾಗಿದೆ” ಎಂದು ಕರ್ನಾಟಕ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಟ್ವೀಟ್​​​ನಲ್ಲಿ ತಿಳಿಸಿದ್ದಾರೆ.



Join Whatsapp