ದಿ ಕೇರಳ ಸ್ಟೋರಿ| ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ

Prasthutha|

ಹೊಸದಿಲ್ಲಿ: ವಿವಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಪ್ರದರ್ಶನವನ್ನು ಪಶ್ಚಿಮಬಂಗಾಳದಲ್ಲಿ ನಿಷೇಧಿಸಿರುವ ರಾಜ್ಯಸರ್ಕಾರದ ನಿರ್ಣಯ ಪ್ರಶ್ನಿಸಿ, ಸಿನಿಮಾದ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯನ್ನು ಮೇ 12ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ.

- Advertisement -

ನಿಷೇಧದಿಂದಾಗಿ ತಂಡಕ್ಕೆ ಅಪಾರ ಹಣಕಾಸು ನಷ್ಟವಾಗುತ್ತಿರುವ ಹಿನ್ನೆಲೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಹಿರಿಯ ವಕೀಲ ಹರೀಶ್‌ ಸಾಳ್ವೆ ಮನವಿ ಮಾಡಿದ್ದರು.

ಈ ಹಿನ್ನೆಲೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದೆ. ಅರ್ಜಿಯಲ್ಲಿ ಬಂಗಾಳ ಸರ್ಕಾರದ ನಿಷೇಧ ಪ್ರಶ್ನಿಸಿರುವುದಲ್ಲದೇ, ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ಎದುರಾಗಿರುವ ಅಡಚಣೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ



Join Whatsapp