ಚಿಣ್ಣರ ಚಾವಡಿ ಮಂಗಳೂರು ಆಶ್ರಯದಲ್ಲಿ ಚಿಣ್ಣರ ಕಲರವ – 2023

Prasthutha|

►ಮಕ್ಕಳ ಸಂತಸ ಕಲಿಕಾ ಕಾರ್ಯಗಾರ

- Advertisement -

ಮಂಗಳೂರು: ಚಿಣ್ಣರ ಚಾವಡಿ ಮಂಗಳೂರು ಆಶ್ರಯದಲ್ಲಿ ಚಿಣ್ಣರ ಕಲರವ – 2023, ಮಕ್ಕಳ ಸಂತಸ ಕಲಿಕಾ ಕಾರ್ಯಗಾರ ಮೇ 22, 23, 24 ರಂದು
ಮಂಗಳೂರಿನ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶಿಬಿರದಲ್ಲಿ ಕ್ರಿಯಾತ್ಮಕ ಚಿತ್ರಕಲೆ, ಊದುವ ಚಿತ್ರ, ಮಡಚುವ ಚಿತ್ರ, ಮುಳುಗಿಸುವ ಚಿತ್ರ, ಕ್ಲೇ ಆರ್ಟ್, ವರ್ಲಿ ಆರ್ಟ್, ಗುಳ್ಳೆ ಆಟ, ಮುಖಾಭಿನಯ, ನಾಟಕ, ಅಭಿನಯ ಗೀತೆ, ಮಿಮಿಕ್ರಿ, ಮ್ಯಾಜಿಕ್ ಶೋ, ಮನೋರಂಜನಾ ಆಟಗಳು ನಡೆಯಲಿವೆ.

- Advertisement -

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೈಮ್ ರಾಮದಾಸ್, ಪ್ರೇಮನಾಥ್ ಮರ್ಣೆ, ವಿಸ್ಮಯ ವಿನಾಯಕ್, ವಿದ್ದು ಉಚ್ಚಿಲ್, ಸೂರಜ್ ಶೆಟ್ಟಿ, ಪ್ರವೀಣ್ ವಿಸ್ಮಯ, ಗುರುಪ್ರಸಾದ್, ತಾರಾನಾಥ ಕೈರಂಗಳ, ಮನೋಜ್ ವಾಮಂಜೂರು ಭಾಗವಹಿಸಲಿದ್ದಾರೆ.

ನಿಬಂಧನೆಗಳು

– ಮೊದಲು ನೋಂದಾವಣೆ ಮಾಡಿದ 60 ಮಕ್ಕಳಿಗೆ ಮಾತ್ರ ಅವಕಾಶ.

– 5ನೇ ತರಗತಿಯಿಂದ 10ನೇ ತರಗತಿಯೊಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ.

– ತಾ. 22-05-2023ರಂದು ಬೆಳಿಗ್ಗೆ 8.30ಕ್ಕೆ ಸ್ಥಳದಲ್ಲೇ ನೋಂದಾವಣೆ ಮಾಡಬೇಕು.

– ನೊಂದಾವಣಾ ಶುಲ್ಕ – ರೂ.100/-

– ಶಿಬಿರಾರ್ಥಿಗಳು 100 ಪುಟದ ಪುಸ್ತಕ, ಪೆನ್, ಪೆನ್ಸಿಲ್,ಕತ್ತರಿ,ಪಾಸ್ ಪೋರ್ಟ್ ಅಳತೆಯ ಫೋಟೋ ತರತಕ್ಕದ್ದು, ಉಳಿದ ಸಾಮಗ್ರಿಗಳನ್ನು ಶಿಬಿರದಲ್ಲಿ ನೀಡಲಾಗುವುದು.

– ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

– ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಶಿಬಿರ ನಡೆಯಲಿದೆ.

– ಶಿಬಿರದಲ್ಲಿ ಬೆಳಿಗ್ಗೆ ಹಾಗೂ ಸಂಜೆ  ಫಲಾಹಾರ ನೀಡಲಾಗುವುದು. ಮದ್ಯಾಹ್ನದ ಊಟವನ್ನು ಮಕ್ಕಳೇ ತರತಕ್ಕದು.

– ಮಕ್ಕಳ ಹೆತ್ತವರು ಶಿಬಿರದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕು. ಉಳಿದ ಸಮಯದಲ್ಲಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 8277691151, 9901699667 ಸಂಖ್ಯೆಗೆ ಸಂಪರ್ಕಿಸಲು ಚಿಣ್ಣರ ಚಾವಡಿ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp