ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಬಹುಮತದ ಸರ್ಕಾರ ರಚಿಸಲಿದೆ ಎಂದು ಪ್ರಮುಖ ಐದು ಸಮೀಕ್ಷೆಗಳು ಹೇಳಿದೆ. ಇಂಡಿಯಾ ಟುಡೇ, ಟೈಮ್ಸ್ ನೌ, ಇಂಡಿಯಾ ಟಿವಿ, ಝೀ ನ್ಯೂಸ್ ಮತ್ತು ನವಭಾರತ್ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ತಿಳಿಸಿದೆ.
ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಸಂಸ್ಥೆಗಳ ಮತದಾನೋತ್ತರ ಸಮೀಕ್ಷೆಯು ಬಿಜೆಪಿ ಬಹುಮತದಿಂದ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಹೇಳಿದೆ.
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಎಂದು ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ. ಎಬಿಪಿ-ಸಿ ವೋಟರ್, ಟಿವಿ9 ಕನ್ನಡ, ರಿಪಬ್ಲಿಕ್, ಭಾರತವರ್ಷ್, ನ್ಯೂಸ್ 18, ವಿಸ್ತಾರ ಅಖಾಡ ನಡೆಸಿದ ಮತಗಟ್ಟೆ ಸಮೀಕ್ಷೆಗಳು 2018ರ ಫಲಿತಾಂಶದಂತೆ ಈ ಬಾರಿಯೂ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹೇಳಿದೆ.
ಅತಂತ್ರ ವಿಧಾನಸಭೆ ಎಂದು ಹೇಳಿದ ಎಲ್ಲಾ ಮತಗಟ್ಟೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತಕ್ಕೆ ಹತ್ತಿರದಲ್ಲಿದೆ.
ಮತಗಟ್ಟೆ ಸಮೀಕ್ಷೆಗಳು
ಇಂಡಿಯಾ ಟುಡೇ
ಕಾಂಗ್ರೆಸ್ – 122-140
ಬಿಜೆಪಿ – 62-80
ಜೆಡಿಎಸ್ – 20-25
ಇತರೆ – 00-03
ಇಂಡಿಯಾ ಟಿವಿ
ಕಾಂಗ್ರೆಸ್ – 110-120
ಬಿಜೆಪಿ – 80-90
ಜೆಡಿಎಸ್ – 20-24
ಇತರೆ – 00-03
ನವಭಾರತ್
ಕಾಂಗ್ರೆಸ್ – 106-120
ಬಿಜೆಪಿ – 78-92
ಜೆಡಿಎಸ್ – 20-26
ಇತರರು – 02-04
ಝೀ ನ್ಯೂಸ್
ಕಾಂಗ್ರೆಸ್ -103-118
ಬಿಜೆಪಿ – 79-94
ಜೆಡಿಎಸ್ – 25-33
ಇತರೆ – 2-5
ಟೈಮ್ಸ್ ನೌ
ಕಾಂಗ್ರೆಸ್ – 113
ಬಿಜೆಪಿ – 85
ಜೆಡಿಎಸ್ – 23
ಇತರೆ – 00-03
ಜನ್ ಕಿ ಬಾತ್
ಕಾಂಗ್ರೆಸ್ – 91-106
ಬಿಜೆಪಿ – 94-117
ಜೆಡಿಎಸ್ – 14-24
ಇತರೆ – 00-02
ನ್ಯೂಸ್ ನೇಷನ್
ಕಾಂಗ್ರೆಸ್ – 86+
ಬಿಜೆಪಿ – 114
ಜೆಡಿಎಸ್ – 21
ಇತರೆ – 03
ಎಬಿಪಿ- ಸಿ ವೋಟರ್
ಕಾಂಗ್ರೆಸ್ – 100-112
ಬಿಜೆಪಿ – 83-95
ಜೆಡಿಎಸ್ – 21-29
ಇತರೆ – 02-06
ಟಿವಿ9 ಕನ್ನಡ
ಕಾಂಗ್ರೆಸ್ -100-112
ಬಿಜೆಪಿ – 83-95
ಜೆಡಿಎಸ್ – 21-29
ಇತರೆ – 2-6
ರಿಪಬ್ಲಿಕ್
ಕಾಂಗ್ರೆಸ್ -94-108
ಬಿಜೆಪಿ – 85-100
ಜೆಡಿಎಸ್ – 24-32
ಇತರೆ – 2-6
ನ್ಯೂಸ್ 18
ಕಾಂಗ್ರೆಸ್ – 102
ಬಿಜೆಪಿ – 96
ಜೆಡಿಎಸ್ – 24
ಇತರೆ – 00-03
ಭಾರತವರ್ಷ್
ಕಾಂಗ್ರೆಸ್ – 99-109
ಬಿಜೆಪಿ – 88-98
ಜೆಡಿಎಸ್ – 21-26
ಇತರೆ – 02-04
ವಿಸ್ತಾರ ಅಖಾಡ
ಕಾಂಗ್ರೆಸ್ – 86-96
ಬಿಜೆಪಿ – 85-93
ಜೆಡಿಎಸ್ – 28-36
ಇತರೆ – 06-09
ಪೋಲ್ ಆಫ್ ಪೋಲ್
ಕಾಂಗ್ರೆಸ್ – 96-108
ಬಿಜೆಪಿ – 86-99
ಜೆಡಿಎಸ್ – 22-30
ಇತರೆ – 02-05