ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತದಾನ ನಡೆಯಲಿದೆ.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಈ ವಿಧಾನದಿಂದ ತಿಳಿಯಿರಿ.
ಮೊದಲು https://ceo.karnataka.gov.in ವೈಬ್ ಸೈಟ್ಗೆ ಭೇಟಿ ನೀಡಿ.
‘ನನ್ನ ಅಗತ್ಯತೆ’ ಎಂಬ ಆಯ್ಕೆಗಳಲ್ಲಿ ‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಹುಡುಕುವುದು’ ಎಂಬವುದನ್ನು ಕ್ಲಿಕ್ ಮಾಡಿ.
ಬಳಿಕ ನಿಮ್ಮ ಹೆಸರು, ವಯಸ್ಸು, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸಿ. ಹುಡುಕಿ ಕ್ಲಿಕ್ ಮಾಡಿ.
ನಂತರ ನಿಮ್ಮ ಸ್ಕ್ರೀನ್ನ ಕೆಳಭಾಗದಲ್ಲಿ ನಿಮ್ಮ ಸಂಪೂರ್ಣ ವಿವರ ದೊರೆಯುತ್ತದೆ.