ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು

Prasthutha|

ಹೈದರಾಬಾದ್: ರೈಲ್ವೇ ಹಳಿಯಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

- Advertisement -

ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೊಹಮ್ಮದ್ ಸರ್ಫ್ರಾಜ್ (16) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

ಹೈದರಾಬಾದ್‌ನ ಸನತ್ ನಗರದ ರೈಲ್ವೆ ಹಳಿ ಮೇಲೆ ತನ್ನ ಎರಡು ಸ್ನೇಹಿತರ ಜತೆಗೂಡಿ ಸರ್ಫ್ರಾಜ್ ಇನ್‌ಸ್ಟಾಗ್ರಾಮ್ ರೀಲ್‌ ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ.

- Advertisement -

ರೀಲ್ಸ್ ಚಿತ್ರೀಕರಿಸುವ ವೇಳೆ ರೈಲು ಸಮೀಪಕ್ಕೆ ಬಂದಿದ್ದು ಬೆನ್ನು ತಿರುಗಿಸಿ ನಿಂತಿದ್ದ ಸರ್ಫ್ರಾಜ್ ಗಮನಿಸಲಿಲ್ಲ. ವೇಗವಾಗಿ ಬಂದ ರೈಲು ಸರ್ಫ್ರಾಜ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸರ್ಫ್ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Join Whatsapp