ಕಲ್ಲೀಕೋಟೆ: ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಕಲ್ಲೀಕೋಟೆಯ ತಿಕ್ಕೋಡಿ ನಿವಾಸಿ ವಿಷ್ಣುಸತ್ಯನ್ ಎಂಬಾತನನ್ನು ಪಯ್ಯೋಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ 100ಕ್ಕೂ ಅಧಿಕ ಮಹಿಳೆಯರ ಫೋಟೋಗಳನ್ನು ನಗ್ನ ಚಿತ್ರಗಳೊಂದಿಗೆ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ತಿರದ ಸಂಬಂಧಿಗಳಾದ ಮಹಿಳೆಯರ ಫೋಟೋಗಳನ್ನೂ ಕೂಡ ವಿಷ್ಣುಸತ್ಯನ್ ಹಂಚಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.