ವಿಚಾರಣಾಧೀನ ಆರೋಪಿ ಸೆಂಟ್ರಲ್ ಜೈಲಿನಲ್ಲೇ ಆತ್ಮಹತ್ಯೆ

Prasthutha|

ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಆರೋಪಿಯೊಬ್ಬ ಜೈಲಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

- Advertisement -


ಭದ್ರಾವತಿ ತಾಲೂಕಿನ ಬಾರಂದೂರು ನಿವಾಸಿ ಕರುಣಾಕರ ದೇವಾಡಿಗ (23) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಾಲ್ಕು ತಿಂಗಳ ಹಿಂದೆ ಭದ್ರಾವತಿ ನಗರದ ದೇವಸ್ಥಾನದ ಬಳಿ ಅನಾಥ ಅಜ್ಜಿಯೊಬ್ಬಳನ್ನು ಕೊಂದು ಪರಾರಿಯಾಗಿದ್ದ ಈತನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದರು.


ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕರೆತರಲಾಗಿದೆ. ಕೊಲೆ ಕೇಸ್ನಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿದ್ದ ಕರುಣಾಕರ್ ಗೆ ಬೇಲ್ ನೀಡಲು ಕುಟುಂಬಸ್ಥರು ಪ್ರಯತ್ನ ಮಾಡುತ್ತಿದ್ದರು. ಈ ಮಧ್ಯೆ ಕರುಣಕಾರ್ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ. ತುಂಗಾ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.



Join Whatsapp