ಆಲಪ್ಪುಝ: ಕೇರಳದಲ್ಲಿ ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ಡಿವೈಎಸ್ಪಿ ಕೆ.ಹರಿಕೃಷ್ಣನ್ ರೈಲಿನಡಿ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರೈಲ್ವೇ ಹಳಿಯ ಬಳಿ ನಿಲ್ಲಿಸಲಾಗಿದ್ದ ಅವರ ಕಾರಿನಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದೆ.
ಆಲಪ್ಪುಝ ಜಿಲ್ಲೆಯ ಕಾಯಂಕುಳಂನ ರಾಮಪುರಂನಲ್ಲಿರುವ ರೈಲ್ವೇ ಕ್ರಾಸಿಂಗ್‌ನಲ್ಲಿ ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ. ಹರಿಪ್ಪಾಡ್ ಮೂಲದ ಹರಿಕೃಷ್ಣನ್, ಪೆರುಂಬಾವೂರ್ ಡಿವೈಎಸ್ಪಿ ಆಗಿದ್ದಾಗ ಸೋಲಾರ್ ಹಗರಣದ ತನಿಖೆಯ ಭಾಗವಾಗಿದ್ದರು. ಅವರು ಇತ್ತೀಚೆಗೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರು ಹೇಳಿಕೆ ನೀಡಿದ್ದಾರೆ.
ಸೋಲಾರ್ ಫಲಕಗಳನ್ನು ಅಳವಡಿಸುವ ಹಗರಣಕ್ಕೆ ಸಂಬಂಧಿಸಿದಂತೆ ಅಂದು ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸುಮಾರು 2 ಕೋಟಿ ರೂ. ಲಂಚ ನೀಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಸೋಲಾರ್ ಹಗರಣದ ಮುಖ್ಯ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.