ಬೆಳ್ತಂಗಡಿ : ತಾಲೂಕು ಪಂಚಾಯತ್ನ ಪಕ್ಕದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಬಾಲಕನೊರ್ವನ ಮೃತದೇಹ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಪ್ರಸಾದ್ (15) ಮೃತ ಬಾಲಕ. ಶಾಲೆಗೆ ರಜೆ ಇರುವ ಕಾರಣ ತನ್ನ ದೊಡ್ಡಮ್ಮ ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜಳಾ ಅವರ ಮನೆಗೆ ಬಂದಿದ್ದ. ಕೆಲಸಕ್ಕೆ ಹೋಗಿದ್ದ ಮಂಜುಳಾ ಕೆಲಸದಿಂದ ವಸತಿಗೃಹಕ್ಕೆ ಬಂದಾಗ ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗದಲ್ಲಿರುವ ಮನೆಯವರಿಗೆ ಮಾಹಿತಿ ನೀಡಲಾಗಿದ್ದು ಮನೆಯವರ ಬರುವಿಕೆಗಾಗಿ ಕಾಯುತ್ತಿದ್ದಾರೆ.