ಶೆಲ್ಲಿ ಒಬೆರಾಯ್ ದೆಹಲಿಯ ಒಮ್ಮತದ ಮೇಯರ್

Prasthutha|

ನವದೆಹಲಿ: ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಶಿಖಾ ರಾಯ್ ಸ್ಪರ್ಧೆಯಿಂದ ಹಿಂದೆ ಸರಿದುದರಿಂದ ಎಎಪಿಯ ಶೆಲ್ಲಿ ಒಬೆರಾಯ್ ದಿಲ್ಲಿಯ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.

- Advertisement -


ಉಪ ಮೇಯರ್ ಸ್ಥಾನಕ್ಕೆ ನಿಂತಿದ್ದ ಬಿಜೆಪಿ ಅಭ್ಯರ್ಥಿ ಸಹ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಯಾವುದೇ ಎದುರಾಳಿ ಇಲ್ಲದೆ ಆಮ್ ಆದ್ಮಿ ಪಕ್ಷವು ಮೇಯರ್ ಚುನಾವಣೆ ಗೆದ್ದಿತು.
ಎಂಸಿಡಿಯ ಸಿವಿಕ್ ಸೆಂಟರ್ ನಲ್ಲಿ ಮೇಯರ್ ಚುನಾವಣೆ ನಡೆಯಿತು. ಫೆಬ್ರವರಿ 22ರಂದು ಎಎಪಿಯ ಶೆಲ್ಲಿಯವರು ಬಿಜೆಪಿಯ ರೇಖಾ ಗುಪ್ತರನ್ನು 150- 116 ಮತಗಳಿಂದ ಸೋಲಿಸಿ ಮೊದಲಿಗೆ ಆಯ್ಕೆಯಾಗಿದ್ದರು.


“ಮೇಯರ್ ಉಪ ಮೇಯರ್ ಆದ ಶೆಲ್ಲಿ ಮತ್ತು ಅಲೆಯ್ ಅವರಿಗೆ ಶುಭಾಶಯಗಳು. ಈ ಬಾರಿ ಎದುರಿಲ್ಲದ ಗೆಲುವು. ಜನರು ನಿಮ್ಮಿಂದ ತುಂಬ ನಿರೀಕ್ಷೆ ಮಾಡುತ್ತಿದ್ದಾರೆ. ಅದಕ್ಕಾಗಿ ಕಠಿಣವಾಗಿ ದುಡಿಯಿರಿ” ಎಂದು ಎಎಪಿ ಮುಖ್ಯರಾದ ಅರವಿಂದ ಕೇಜ್ರೀವಾಲ್ ಟ್ವೀಟ್ ಮಾಡಿದರು.

- Advertisement -


ದಿಲ್ಲಿ ಮೇಯರ್ ಗಿರಿಯು ಒಂದು ವರ್ಷ ಅವಧಿಯ ಐವರಿಗೆ ಸರತಿಯ ಮೇಲೆ ಅವಕಾಶ ನೀಡುವುದಾಗಿದೆ. ಮೊದಲ ವರ್ಷ ಮಹಿಳೆ, ಎರಡನೆಯ ವರ್ಷ ಮುಕ್ತ, ಮೂರನೆಯ ವರ್ಷ ಮೀಸಲಾತಿ ಆಧಾರದಲ್ಲಿ. ಮುಂದಿನೆರಡು ವರ್ಷಗಳು ಕೂಡ ಮುಕ್ತ ರೀತಿಯದಾಗಿದೆ. ಹಣಕಾಸು ವರ್ಷ ಕಳೆದ ಮೇಲೆ ದಿಲ್ಲಿ ಹೊಸ ಮೇಯರನ್ನು ಕಾಣುತ್ತಿದೆ.
ಈ ತಿಂಗಳ ಆರಂಭದಲ್ಲಿ ಎಎಪಿಯ ಶೆಲ್ಲಿ ಒಬೆರಾಯ್ ಮತ್ತು ಅಲೆಯ್ ಮುಹಮ್ಮದ್ ಇಕ್ಬಾಲ್ ಅವರು ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇದು ಅವರಿಗೆ ಸತತ ಎರಡನೆಯ ಅವಧಿ.



Join Whatsapp