3,632 ಅಭ್ಯರ್ಥಿಗಳಿಂದ 5,102 ನಾಮಪತ್ರ ಸಲ್ಲಿಕೆ

Prasthutha|

ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ 3,632 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ 5,102 ನಾಮಪತ್ರಗಳ ಪರಿಶೀಲನೆ ನಡೆದಿದೆ.

- Advertisement -


ಬಿಜೆಪಿಯವರಿಂದ 707, ಕಾಂಗ್ರೆಸ್ ಪಕ್ಷದವರಿಂದ 651, ಜೆಡಿಎಸ್ ನಿಂದ 455 ನಾಮಪತ್ರಗಳು ಹಾಗೂ ಇತರ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಂದಲೂ ನಾಮಪತ್ರ ಸಲ್ಲಿಕೆಯಾಗಿವೆ.


ಸಲ್ಲಿಕೆಯಾದ ನಾಮಪತ್ರಗಳಲ್ಲಿ 304 ಮಾತ್ರ ಮಹಿಳಾ ಸ್ಪರ್ಧಿಗಳಿದ್ದು, ಅವರು ಸಲ್ಲಿಸಿರುವ ನಾಮಪತ್ರಗಳ ಸಂಖ್ಯೆ 391. 3,327 ಪುರುಷರಿಂದ 4,710 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಬ್ಬ ಅಭ್ಯರ್ಥಿಯು ಗರಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ.



Join Whatsapp