ಮಗಳ ಚಿಕಿತ್ಸೆಗೆ ಹಣ ಒದಗಿಸಲಾಗದೇ ತಂದೆ ಆತ್ಮಹತ್ಯೆ

Prasthutha|

ಭೋಪಾಲ್: ಕಳೆದ 5 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಗಳ ಚಿಕಿತ್ಸೆಗೆ ಹಣ ಒದಗಿಸಲಾಗದೇ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.
ಪ್ರಮೋದ್ ಅವರ ಪುತ್ರಿ ಅನುಷ್ಕಾಗೆ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ. ಇದರಿಂದ ತಂದೆ ಪ್ರಮೋದ್, ಹಾಸಿಗೆ ಹಿಡಿದ ತನ್ನ ಮಗಳ ಚಿಕಿತ್ಸೆಗೆಂದು ಹಣ ಒದಗಿಸಲು ಹಾಗೂ ಕುಟುಂಬ ನಿರ್ವಹಣೆಗಾಗಿ ಇದ್ದ ಅಂಗಡಿ, ಮನೆ ಎಲ್ಲವನ್ನೂ ಮಾರಿದ್ದಾರೆ.

- Advertisement -


ಎಲ್ಲವೂ ಖಾಲಿಯಾದ ನಂತರ ಕುಟುಂಬಕ್ಕೆ ಆಹಾರ ಪೂರೈಕೆ ಮಾಡಲು ರಕ್ತ ಮಾರಾಟವನ್ನೂ ಮಾಡಿದ್ದರು. ರಕ್ತ ಮಾರಾಟ ಮಾಡಿದ ನಂತರ ಪ್ರಮೋದ್ ಅನಾರೋಗ್ಯಕ್ಕೆ ತುತ್ತಾಗಿದ್ದರು, ಆ ನಂತರ ಹಣ ಸಂಪಾದನೆ ಮಾಡಲಾಗಲಿಲ್ಲ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗಲಿಲ್ಲ. ನನ್ನ ತಂದೆ ಎಷ್ಟು ಅಲೆದಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ದಿನನಿತ್ಯದ ಅಗತ್ಯತೆಗಳನ್ನ ಪೂರೈಸಲು ನನ್ನ ತಂದೆ ರಕ್ತವನ್ನೂ ಮಾರಾಟ ಮಾಡಿದ್ದರು. ಆದರೂ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಇದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಷ್ಕಾ ಹೇಳಿದ್ದಾರೆ.



Join Whatsapp