BWSSB ಅಸಮರ್ಪಕ ಕಾಮಗಾರಿಗೆ ಮಗು ಬಲಿ

Prasthutha|

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡ್ಲ್ಯೂ ಎಸ್ ಎಸ್ ಬಿ) ನಿರ್ಲಕ್ಷ್ಯದ ಅರೆಬರೆ ಕಾಮಗಾರಿಗೆ ಅಮಾಯಕ ಮಗುವೊಂದು ಬಲಿಯಾದ ಘಟನೆ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

- Advertisement -


ಕೂಲಿ ಕೆಲಸಗಾರ ಹನುಮಾನ್ ಎಂಬವರ ಪುತ್ರ ಎರಡೂವರೆ ವರ್ಷದ ಕಾರ್ತಿಕ್ ಮೃತಪಟ್ಟ ಮಗು.


ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಾಗಿ ಹೊಂಡ ತೆಗೆಯಲಾಗಿದ್ದು ಕೆಲಸ ನಡೆಯುತ್ತಿದ್ದರಿಂದ ಅದನ್ನು ಮುಚ್ಚಿರಲಿಲ್ಲ. ಅಲ್ಲಿ ಆಟವಾಡುತ್ತಿದ್ದ ಕಾರ್ತಿಕ್ ಹೊಂಡದ ಬಳಿ ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

- Advertisement -


ಕಾರ್ತಿಕ್ ಪೋಷಕರು ಉತ್ತರ ಪ್ರದೇಶ ಮೂಲದವರಾಗಿದ್ದು, ಕೂಲಿ ಕೆಲಸಕ್ಕಾಗಿ ಈ ಕುಟುಂಬ ಬೆಂಗಳೂರಿಗೆ ಬಂದಿದ್ದು ಗೊಲ್ಲರಹಟ್ಟಿಯ ಬಳಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಬಿಡ್ಲ್ಯೂ ಎಸ್ ಎಸ್ ಬಿ ಅರೆಬರೆ ಕೆಲಸಕ್ಕೆ ಪುತ್ರ ಕಾರ್ತಿಕ್ನನ್ನು ಕಳೆದುಕೊಂಡ ಹನುಮಾನ್ ದಂಪತಿ ರೋದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಬಿಡ್ಲ್ಯೂ ಎಸ್ ಎಸ್ ಬಿ ಎಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.



Join Whatsapp