ಭಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ಕಾಳಗ ಪ್ರಕರಣ: ಗುಂಡು ಹಾರಿಸಿಕೊಂಡು ಮತ್ತೋರ್ವ ಸೈನಿಕ ಆತ್ಮಹತ್ಯೆ

Prasthutha|

ಭಟಿಂಡ ಮಿಲಿಟರಿ ನೆಲೆಯಲ್ಲಿ ನಾಲ್ವರು ಸೈನಿಕರು ಅಪರಿಚಿತನ ಗುಂಡಿಗೆ ಬಲಿಯಾದ ಒಂದೇ ಗಂಟೆಯಲ್ಲಿ ಬುಧವಾರ ಮುಂಜಾವ 4.30 ಗಂಟೆಗೆ ಮತ್ತೊಬ್ಬ ಸೈನಿಕ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದು, ಇದು ಆತ್ಮಹತ್ಯೆ ಎಂದು ಹೇಳಲಾಗಿದೆ.

- Advertisement -


ಸೆಂಟ್ರಿ ಕರ್ತವ್ಯದಲ್ಲಿದ್ದ ಸೈನಿಕ ತನ್ನ ಕೋವಿಯ ಗುಂಡೇಟಿನಿಂದ ಮೃತಪಟ್ಟಿದ್ದು, ಆತ ಬಿದ್ದ ಸ್ಥಳದಲ್ಲಿ ಬಂದೂಕು ಕಂಡು ಬಂದಿದೆ.
ಏಪ್ರಿಲ್ 11ರಂದಷ್ಟೆ ಕರ್ತವ್ಯಕ್ಕೆ ವಾಪಾಸಾಗಿದ್ದ ಆತನನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಪಕ್ಷಿ ಮೊದಲೇ ಹೋಗಿತ್ತು. ಅದಕ್ಕೆ ಮೊದಲು ನಾಲ್ವರ ಮೇಲೆ ಗುಂಡು ಹಾರಿಸಿ ಕೊಂದವರು ಯಾರು ಎಂಬ ಬಗ್ಗೆ ಉತ್ತರ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೇನಾ ಠಾಣೆ ಹೇಳಿಕೆ ನೀಡಿದೆ.



Join Whatsapp