ಬಿಎಸ್’ಪಿ 2ನೇ ಪಟ್ಟಿ ಬಿಡುಗಡೆ: ಹೋರಾಟಗಾರರಿಗೆ ಹೆಚ್ಚಿನ ಸ್ಥಾನ

Prasthutha|

ಬೆಂಗಳೂರು: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಲಿತ, ಅಲ್ಪಸಂಖ್ಯಾತರ ಪರ ಧ್ವನಿಗೂಡಿಸುವ ಹೋರಾಟಗಾರರಿಗೆ ಹೆಚ್ಚಿನ ಸ್ಥಾನ ಮೀಸಲಿಟ್ಟಿದೆ.

- Advertisement -


ಈ ಕುರಿತು ಮಾಹಿತಿ ನೀಡಿದ ಬಿಎಸ್’ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಬಿಎಸ್’ಪಿ ಪಕ್ಷ ಶೋಷಿತರ ಪರ ಧ್ವನಿಗೂಡಿಸುವ ಏಕೈಕ ಪಕ್ಷವಾಗಿದೆ. ಈ ಹಿನ್ನೆಲೆ ಹೋರಾಟಗಾರರು, ಚಿಂತಕರು, ಸಾಮಾಜಿಕ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಹಿತರಕ್ಷಣೆಗೆ ದುಡಿಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅದರಲ್ಲೂ ಈ ಸಮುದಾಯಗಳು ಈಗಲೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದಿವೆ. ಮುಂದಿನ ದಿನಗಳಲ್ಲಿ ಬಿಎಸ್ಪಿ ಅಧಿಕಾರಕ್ಕೇರಿದರೆ, ಶೋಷಿತ ಸಮುದಾಯದ ಪ್ರಗತಿಗೆ ದುಡಿಯಲಾಗುವುದು ಎಂದು ಅವರು ನುಡಿದರು.


ಎರಡನೆ ಪಟ್ಟಿ: ಬಿಎಸ್ಪಿಯ ಎರಡನೇ ಪಟ್ಟಿಯಲ್ಲಿ 57 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪೈಕಿ ಹೋರಾಟಗಾರ ಎ.ಜೆ.ಖಾನ್ ಅವರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಅದೇ ರೀತಿ, ಕುಡಚಿ-ಚಂದ್ರಕಾಂತ್ ಸುಭಾಷ್ ಕದ್ರೋಳ್ಳಿ, ಹುಕ್ಕೇರಿ-ಬಸವರಾಜ್ ಕಾಂಬಳೆ, ಅರಭಾವಿ-ಬಸವಂತ್ ಈರಪ್ಪ ಮಡ್ಡರ್, ಗೋಕಾಕ್-ಬಿ.ಸಿ.ಲೋಹಿತ್, ಖಾನಾಪುರ-ಯಲ್ಲಪ್ಪ ಕೋಲ್ಕರ್, ಇಂಡಿ-ನಾಗೇಶ್ ಹುಸೇನಿ ಶಿವಶರಣ, ಚಿತ್ತಾಪುರ(ಎಸ್ಸಿ)-ಶರಣು ಬಸಪ್ಪ ಸೂಗೂರ, ಬೀದರ್ ಉತ್ತರ-ಸೆಯ್ಯದ್ ವಹೀದ್ ಲಕನ್, ರಾಯಚೂರು-ಜೈಭೀಮಾ, ಕನಕಗಿರಿ(ಎಸ್ಸಿ)-ಬೆನೇಳಪ್ಪ.
ಕೊಪ್ಪಳ-ಮೈಲಾರಪ್ಪ, ಗದಗ-ಮಹದೇವ ಹುಚ್ಚಪ್ಪ ಛಲವಾದಿ, ರೋಣ-ಬಸಪ್ಪ ತಿಮ್ಮಪ್ಪ ವಡ್ಡರ, ಹಾವೇರಿ(ಎಸ್ಸಿ)–ಅಶೋಕ ಮರಿಯಣ್ಣನವರ, ಹಗರಿಬೊಮ್ಮನಹಳ್ಳಿ(ಎಸ್ಸಿ)–ತಿಪ್ಪೇಸ್ವಾಮಿ, ಚಿತ್ರದುರ್ಗ-ಡಿ.ಪ್ರಕಾಶ್, ಮಾಯಾಕೊಂಡ(ಎಸ್ಸಿ)-ಟಿ.ಯಶೋಧಾ ಪ್ರಕಾಶ್, ಚನ್ನಗಿರಿ-ಪ್ರವೀಣ್ ಎಚ್., ಹೊನ್ನಾಳಿ-ಕೃಷ್ಣಪ್ಪ,ಚಿಕ್ಕಮಗಳೂರು-ಕೆ.ಬಿ.ಸುಧಾ, ಚಿಕ್ಕನಾಯಕನಹಳ್ಳಿ-ಕೆ.ಎಂ.ಸತೀಶ್, ಗೌರಿಬಿದನೂರು-ಕೆ.ಪ್ರಕಾಶ್ ಬಾಬು, ಶಿಢ್ಲಘಟ್ಟ-ವೆಂಕಟರಮಣಪ್ಪ,ಚಿಂತಾಮಣಿ-ಪಿ.ವಿ.ನಾಗಪ್ಪ,ಶ್ರೀನಿವಾಸಪುರ-ವಿ.ನರಸಿಂಹಯ್ಯ.

- Advertisement -


ಮುಳಬಾಗಿಲು(ಎಸ್ಸಿ)–ರವಿಕುಮಾರ್ ವೆಂಕಟೇಶಪ್ಪ, ಕೆಜಿಎಫ್ (ಎಸ್ಸಿ)–ಕೋದಂಡ ಆರ್., ಮಾಲೂರು-ಎನ್.ರಮೇಶ್, ಮಹಾಲಕ್ಷ್ಮೀಲೇಔಟ್-ಎನ್.ನಾರಾಯಣಸ್ವಾಮಿ, ಚಾಮರಾಜಪೇಟೆ-ನರಸಿಂಹಮೂರ್ತಿ, ಗೋವಿಂದರಾಜನಗರ-ಪಿ.ಇಮ್ರಾನ್ ಖಾನ್, ಚಿಕ್ಕಪೇಟೆ-ಅರುಣ್ ಪ್ರಸಾದ್, ಪದ್ಮನಾಭನಗರ-ಟಿ.ಕೃಷ್ಣ, ಬಿಟಿಎಂಲೇಔಟ್-ತ್ಯಾಗರಾಜ್, ಜಯನಗರ-ಆರ್.ಸೆಲ್ವಕುಮಾರ್, ಮಹದೇವಪುರ(ಎಸ್ಸಿ)-ಕೆ.ಸಿ.ಪ್ರಸಾದ್, ಕೃಷ್ಣರಾಜಪೇಟೆ-ಬಿ.ಡಿ.ಪ್ರದೀಪ್, ಶ್ರವಣಬೆಳಗೋಳ-ಆರ್.ರಾಜು,ಹಾಸನ-ಎಚ್.ಬಿ.ಮಲ್ಲಯ್ಯ,ಹನೂರು-ಎಂ.ಮಾದೇಶ್.
ಸಕಲೇಶಪುರ-ಡಿ.ಶಿವಮ್ಮಾ, ಭಾಲ್ಕಿ-ಶಕ್ತಿಕಾಂತ್ ಬಾವಿದೊಡ್ಡಿ, ಸೇಡಂ-ರೇವಣ ಸಿದ್ದಪ್ಪ ಶಿಂಧೆ, ಬಸವನಬಾಗೇವಾಡಿ-ಗುರುಬಸಪ್ಪ ಡಾವಳಗಿ, ಸರ್ವಜ್ಞನಗರ-ಡಿ.ಸುಂದರ್ ರಾಜನ್, ಶಿವಾಜಿನಗರ-ಡಾ.ಎಂ.ಕೆ.ಪಾಷಾ, ಬ್ಯಾಟರಾಯನಪುರ-ಸಂಪೂರ್ಣಗೌಡ, ಸಿ.ವಿ.ರಾಮನ್ನಗರ(ಎಸ್ಸಿ)-ಆಂಜಿ,ದೊಡ್ಡಬಳ್ಳಾಪುರ-ಪಿಳ್ಳಪ್ಪ,ವಿಜಯನಗರ-ಜಯಕುಮಾರ್.
ಕೊರಟಗೆರೆ(ಎಸ್ಪಿ) -ಎಸ್.ಜಿ. ಮಂಜುನಾಥ್,ಸಂಡೂರು(ಎಸ್ಟಿ)-ಕೆ.ಶಕಂತಲಾ,ಕೃಷ್ಣರಾಜಪುರಂ-ಎಸ್.ವೆಂಕಟೇಶ್ವರ್, ಕಲಬುರ್ಗಿ ಉತ್ತರ-ಮುಹಮ್ಮದ್ ಸಹಾ, ತುಮಕೂರು ಸಿಟಿ-ಕೆ.ಬಿ.ದಿನೇಶ್ ಬಾನು, ದೇವನಹಳ್ಳಿ(ಎಸ್ಸಿ)ನಂದಿಗುಂದ ವೆಂಕಟೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.



Join Whatsapp