ನವದೆಹಲಿ: ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ಕಾರ್ಪೊರೇಟ್ ಉದ್ಯಮಿಗಳಾದ ಅಂಬಾನಿ, ಅದಾನಿಯಿಂದ ಈಗ ಯೋಗಗುರು ಬಾಬಾ ರಾಮ್ ದೇವ್ ರತ್ತ ತಿರುಗಿದೆ. ಈಗಾಗಲೇ ಅಂಬಾನಿ, ಅದಾನಿ ಮಾಲಕತ್ವದ ಉದ್ಯಮ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಈಗ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಅಂಗಡಿಗಳ ಮುಂದೆಯೂ ಪ್ರತಿಭಟಿಸಿದ್ದಾರೆ.
ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಆಂದೋಲನ ವಿಸ್ತಾರ ಮೊರ್ಚಾ ಸಂಘಟನೆಯ ಕಾರ್ಯಕರ್ತರು ರಿಲಯನ್ಸ್ ಮತ್ತು ಪತಂಜಲಿ ಅಂಗಡಿಗಲ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಸಂಘಟನೆಯ ಕಾರ್ಯಕರ್ತರು ಜೂ ಕಿಸಾನ್, ಜೀ ಜವಾನ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.