ನವದೆಹಲಿ: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ವೀಡಿಯೋದಲ್ಲಿ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ.
ದಲೈ ಲಾಮಾ ಸಾರ್ವಜನಿಕವಾಗಿ ಟೀಕೆಗೊಳಗಾಗಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಿದ್ದರೆ ಅವರು ಅತ್ಯಂತ ಆಕರ್ಷಕವಾಗಿರಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು.