ಕುಂದಾಪುರ: ಫಾಲ್ಸ್ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Prasthutha|

ಕುಂದಾಪುರ: ಸ್ನಾನಕ್ಕಿಳಿದ ವೇಳೆ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್ ನಲ್ಲಿ ನಡೆದಿದೆ.

- Advertisement -


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಚಿರಾಂತ್ ಶೆಟ್ಟಿ(20) ನೀರುಪಾಲಾಗಿ ಮೃತಪಟ್ಟ ಯುವಕ.


ಗೆಳೆಯರೊಂದಿಗೆ ಶುಕ್ರವಾರ ಸಂಜೆ ಕೊಸಳ್ಳಿ ಫಾಲ್ಸ್ ಗೆ ಬಂದಿದ್ದ ಇವರು ನೀರಿಗಿಳಿದ ವೇಳೆ ಮುಳುಗಿ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.



Join Whatsapp