ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಘೋಷಣೆಯ ಬಳಿಕ ಕಾಫಿನಾಡು ಪೊಲೀಸರು ಅಕ್ರಮ ಹಣ, ಮದ್ಯ ಸಾಗಾಟದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ರಾತ್ರಿಯೂ ಚಿಕ್ಕಮಗಳೂರು ತಾಲೂಕಿನಲ್ಲಿ ದೇವರಹಳ್ಳಿ ಬಳಿ ಒಂದು ಲಾರಿ ಲೋಡ್ ಬಿಯರ್ ವಶ ಪಡಿಸಿಕೊಂಡಿದ್ದಾರೆ.
ಕೊಪ್ಪ ತಾಲೂಕಿನ ಗಡಿಕಲ್ ಚೆಕ್ ಪೋಸ್ಟ್’ನಲ್ಲಿ ಕಳೆದ ರಾತ್ರಿ ಕರ್ತವ್ಯದಲ್ಲಿದ್ದ ಚಿಕ್ಕಮಗಳೂರು ಪೊಲೀಸರು, 9,10,920 ರೂ ಮೌಲ್ಯದ 6250 ಲೀಟರ್ ಮದ್ಯ, ದಾಖಲೆ ಇಲ್ಲದ 2 ಲಕ್ಷ 50 ಸಾವಿರ ಮೌಲ್ಯದ ಜೀನ್ಸ್ ಪ್ಯಾಂಟ್, ದಾಖಲೆ ಇಲ್ಲದ 2 ಲಕ್ಷದ 80 ಸಾವಿರ ಮೌಲ್ಯದ ಹಣ ಜಪ್ತಿ ಮಾಡಿದ್ದಾರೆ.