ಬೆಂಗಳೂರಿನ ತಾಯಿಯ ಪಾಕ್ ನ ಅಪ್ರಾಪ್ತ ಮಕ್ಕಳ ಭಾರತ ಪೌರತ್ವ ಅರ್ಜಿ ಹೈಕೋರ್ಟ್ ವಜಾ

Prasthutha|

ಬೆಂಗಳೂರು: ಪಾಕಿಸ್ತಾನ ಮೂಲದ ಇಬ್ಬರು ಅಪ್ರಾಪ್ತ ಮಕ್ಕಳು ಭಾರತದ ಪೌರತ್ವಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

- Advertisement -


ಮಾನವೀಯತೆ ಆಧಾರದಲ್ಲಿ ಪಾಸ್ ಪೋರ್ಟ್ ಪಡೆದು ಭಾರತಕ್ಕೆ ಮರಳಿದ ನಗರದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಕಾನೂನಿನ ತೊಡಕು ಎದುರಾಗಿದ್ದು, ಪಾಕಿಸ್ತಾನ ಪೌರತ್ವ ತ್ಯಜಿಸದೆ ಭಾರತ ಪೌರತ್ವ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಭಾರತದ ಪೌರತ್ವ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ ಪಾಕಿಸ್ತಾನ ಪೌರತ್ವ ತ್ಯಜಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎನ್ನುವ ನಿಯಮವಿದೆ. ಈ ಕಾರಣದಿಂದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.


ನಗರದ ಅಮೀನಾ ರಾಹೀಲ್, ಪಾಕಿಸ್ತಾನದ ಮೂಲದ ಅಸಾದ್ ಮಲಿಕ್ ಜೊತೆ 2002ರಲ್ಲಿ ವಿವಾಹವಾಗಿದ್ದು, ದುಬೈನಲ್ಲಿ ಅದ್ಧೂರಿ ಮದುವೆ ನಡೆದಿದೆ. ಉದ್ಯೋಗ ಕಾರಣ ಅಸಾದ್ ಹಾಗೂ ಅಮೀನಾ ದುಬೈನಲ್ಲೇ ನೆಲೆಸಿದ್ದರು. ದಂಪತಿಗೆ 17 ವಯಸ್ಸು ಹಾಗೂ 14 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದರೆ 2014ರಲ್ಲಿ ಅಮೀನಾ ಹಾಗೂ ಅಸಾದ್ ದುಬೈ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ದರು.
ಈ ವೇಳೆ ಮಕ್ಕಳ ಪಾಲನೆ ಹಾಗೂ ಎಲ್ಲಾ ಹಕ್ಕನ್ನು ತಾಯಿಗೆ ನೀಡಲಾಗಿತ್ತು. 2021ರಲ್ಲಿ ಅಮೀನಾ ದುಬೈ ಜೀವನ ಕಷ್ಟವಾದ ಕಾರಣ ತಾಯಿ ಮನಗೆ ಮರಳಲು ನಿರ್ಧರಿಸಿದ್ದರು. ತಾಯಿ ಅಮೀನಾ ಭಾರತದ ಪ್ರಜೆಯಾದರೂ, ಮಕ್ಕಳಿಬ್ಬರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ.

- Advertisement -


ತಂದೆ ಪಾಕಿಸ್ತಾನ ಪ್ರಜೆಯಾದ ಕಾರಣ ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ಸಿಕ್ಕಿದೆ. ಆದರೆ ಅಮೀನಾ ಭಾರತಕ್ಕೆ ಮರಳಲು ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಇಬ್ಬರು ಅಪ್ರಾಪ್ತ ಮಕ್ಕಳ ಬಳಿ ಭಾರತದಲ್ಲಿ ಪಾಸ್ ಪೋರ್ಟ್ ಇಲ್ಲದ ಕಾರಣ ಕಾನೂನು ತೊಡಕು ಎದುರಾಗಿತ್ತು. ಅಮೀನಾ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ನೆಲಸಲು ಮಾನ್ಯತೆ ಇಲ್ಲದಾಗಿತ್ತು.
ಈ ವೇಳೆ ಮಕ್ಕಳ ಪಾಕಿಸ್ತಾನ ಪಾಸ್ ಪೋರ್ಟ್ ಕಚೇರಿಗೆ ಹಿಂದುರುಗಿಸಿ, ಮಾನವೀಯತೆ ಆಧಾರದಲ್ಲಿ ಭಾರತ ರಾಯಭಾರ ಕಚೇರಿ ತಾತ್ಕಾಲಿಕ ಪಾಸ್ ಪೋರ್ಟ್ ನೀಡಿತ್ತು. ಬಳಿಕ ಬೆಂಗಳೂರಿಗೆ ಆಗಮಿಸಿದ ಅಮೀನಾ ಹಾಗೂ ಇಬ್ಬರು ಮಕ್ಕಳು ತಾಯಿ ಮನೆಯಲ್ಲಿ ವಾಸವಾಗಿದ್ದಾರೆ. 17 ವರ್ಷ ಹಾಗೂ 14 ವರ್ಷದ ಮಕ್ಕಳು ಪಾಕಿಸ್ತಾನ ಪೌರತ್ವ ತ್ಯಜಿಸಿ ಭಾರತದ ಪೌರತ್ವ ಪಡೆಯಬೇಕಿದೆ.
ಆದರೆ ತಾತ್ಕಾಲಿಕ ಪಾಸ್‌ಪೋರ್ಟ್ ಅವಧಿ ಅಂತ್ಯಗೊಂಡಿದೆ. ಇತ್ತ ಗೃಹ ಸಚಿವಾಲಯಕ್ಕೆ ಮನವಿ ಮಾಡಿದರೂ ಉತ್ತರ ಬಂದಿರಲಿಲ್ಲ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ಭಾರತ ಪೌರತ್ವ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.



Join Whatsapp