ತನಗಾಗಿ ಕೆನಡಾದಿಂದ ಭಾರತಕ್ಕೆ ಬಂದ ಪ್ರೇಯಸಿಯನ್ನು ಕೊಂದು ಹೊಲದಲ್ಲಿ ಹೂತಿಟ್ಟ ಪ್ರಿಯಕರ

Prasthutha|

ಚಂಡೀಗಢ: ಪ್ರಿಯಕರನನ್ನು ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿಯನ್ನು ಆತನ ಪ್ರಿಯಕರನೇ ಕೊಂದು ಮೃತದೇಹವನ್ನು ಹೊಲದಲ್ಲಿ ಹೂತಿಟ್ಟ ಘಟನೆ ನಡೆದಿದೆ.
ಕಳೆದ ವರ್ಷ ಜೂನ್’ನಲ್ಲಿ ನೀಲಂ (23) ಎಂಬಾಕೆಯನ್ನು ಆಕೆಯ ಪ್ರಿಯಕರನೇ ಗುಂಡಿಟ್ಟು ಕೊಂದಿದ್ದು, ನಂತರ ಮೃತದೇಹವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ.

- Advertisement -


ಸುನಿಲ್ ತನಗಾಗಿ ಬಂದ ಪ್ರಿಯತಮೆಯನ್ನು ಗುಂಡಿಟ್ಟು ಕೊಂದು ಮೃತದೇಹವನ್ನು ಹೂತುಹಾಕಿದ್ದಾನೆ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಸಿಕ್ಕಿವೆ.
ಯುವತಿ ನೀಲಂಳನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ.
ಕಳೆದ ಜೂನ್’ನಲ್ಲಿ ನೀಲಂ ಅವರ ಸಹೋದರಿ ರೋಶನಿ ಪೊಲೀಸರಿಗೆ ದೂರು ನೀಡಿದ್ದರು. ನೀಲಂ, ಇಂಟರ್ ನ್ಯಾಷನಲ್ ಇಂಗ್ಲಿಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ (ಐಇಎಲ್’ಟಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಳು. ಕೆಲಸಕ್ಕಾಗಿ ಕೆನಡಾಕ್ಕೆ ಹೋಗಿದ್ದಳು. ಕಳೆದ ವರ್ಷ ಜನವರಿಯಲ್ಲಿ ಸುನಿಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಕಸ್ಟಡಿಯಲ್ಲಿದ್ದ ಸುನಿಲ್ ವಿಚಾರಣೆಯ ಆಧಾರದ ಮೇಲೆ ಅಧಿಕಾರಿಗಳು ನೀಲಂ ಅಸ್ಥಿಪಂಜರದ ಅವಶೇಷಗಳನ್ನು ಆತನ ಜಮೀನಿನಲ್ಲಿ 10 ಅಡಿ ಆಳದ ಗುಂಡಿಯಿಂದ ಹೊರತೆಗೆದು ಮೃತದೇಹವನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.



Join Whatsapp