ಹೊಸದಿಲ್ಲಿ: ಕೇಂದ್ರ ಮತ್ತು ರೈತ ಒಕ್ಕೂಟಗಳ ಮಧ್ಯೆ ನಡೆಯುತ್ತಿರುವ ಮಾತುಕತೆಗಳ ಕುರಿತು ತಾನು ತೀವ್ರ ನಿರಾಶನಾಗಿದ್ದೇನೆ ಎಂದು ಸುಪ್ರೀಂ ಕೋರ್ಟ್ ಸೋಮವಾರದಂದು ಹೇಳಿದೆ. ಸರಕಾರವು ಈ ಕಾನೂನುಗಳನ್ನು ತಡೆಹಿಡಿಯಲು ನಿರಾಕರಿಸಿದರೆ ತಾನು ತಡೆಹಿಡಿಯುವುದಾಗಿ ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್ ಮೂರು ವಿವಾದಿತ ಕೃಷಿ ಕಾನೂನುಗಳು ಮತ್ತು ಹೊಸದಿಲ್ಲಿಯ ಹೊರವಲಯದಲ್ಲಿ ರೈತರ ನಿರಂತರ ಧರಣಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ತೀರ್ಪು ನೀಡಿದೆ.
ಶಾಸನಗಳನ್ನು ಹಿಂಪಡೆಯಲು ಮತ್ತು ಕನಿಷ್ಠ ಬೆಂಬಲ ಬೆಲೆ ಪಡೆಯಲು ಕಾನೂನು ಬೆಂಬಲವನ್ನು ಕೋರಿ ಪ್ರತಿಭಟಿಸುತ್ತಿರುವ ರೈತರನ್ನು ತಣಿಸುವುದಕ್ಕಾಗಿ ನಡೆದ ಸರಕಾರದ ಎಂಟು ಸುತ್ತುಗಳ ಮಾತುಕತೆಗಳು ಇದುವರೆಗೆ ವಿಫಲವಾಗಿದೆ. ಕಾನೂನುಗಳ ಸಾಂವಿಧಾನಿಕ ಅರ್ಹತೆಯನ್ನು ಸುಪ್ರೀಂ ಕೋರ್ಟ್ ಪರೀಕ್ಷಿಸಿದ ನಂತರ ಜನವರಿ 15ರಂದು ಒಂಬತ್ತನೆ ಸುತ್ತಿನ ಮಾತುಕತೆ ನಡೆಯಲಿದೆ.
ಕಳೆದ 40 ದಿನಗಳಿಂದ ರಾಜಧಾನಿ ಹೊಸದಿಲ್ಲಿ ಸುತ್ತಮುತ್ತಲಿನ ಬೀದಿಗಳಲ್ಲಿ ಹತ್ತಾರು ಸಾವಿರಾರು ರೈತರು, ಅವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣಗಳಿಂದ ಬಂದವರು ಬೀಡುಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಮತ್ತು ತೀವ್ರ ಚಳಿಯಿದ್ದರೂ ಅದನ್ನು ಎದುರಿಸಿ ಪ್ರತಿಭಟನಾ ನಿರತರಾಗಿದ್ದಾರೆ.