ಮಂಗಳೂರು: ದ್ವಿಚಕ್ರ ವಾಹನ ಕಳ್ಳರ ಬಂಧನ; 6 ದ್ವಿಚಕ್ರಗಳ ವಶ

Prasthutha|

ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -


ಮಂಗಳೂರು ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಸಿನಾನ್(19), ಮುಹಮ್ಮದ್ ಸಾಹಿಲ್ ಬೆಂಗ್ರೆ(22), ಉಳ್ಳಾಲ ನಿವಾಸಿ ಫೈಜಲ್ ಅಲಿಯಾಸ್ ತೋಟ ಫೈಸಲ್(35), ನಂದಾವರ ನಿವಾಸಿ ಮುಹಮ್ಮದ್ ಸಾಹಿಲ್(18) ಎಂದು ಗುರುತಿಸಲಾಗಿದೆ.

- Advertisement -

ಆರೋಪಿಗಳಿಂದ ರೂ. 2,15,000/- ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ದ್ವಿಚಕ್ರ ವಾಹನಗಳನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಶಪಡಿಸಿಕೊಂಡ ದ್ವಿಚಕ್ರವಾಹನಗಳ ವಿವರ

  1. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಗ್ರಾಂಡ್ ಸಿಟಿ ಕಾಂಪ್ಲೆಕ್ಸ್ ಬಳಿಯಿಂದ ದಿನಾಂಕ: 27-03- 2023 ರಂದು ಕಳವುಗೈದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್-1
  2. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ದಿನಾಂಕ: 28-03-2023 ರಂದು ಕಳವುಗೈದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್-1
  3. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ ಫೆರಿ ಬಳಿಯಿಂದ ದಿನಾಂಕ: 07-03-2023 ರಂದು ಕಳವುಗೈದ ಹೊಂಡಾ ಅಕ್ಟಿವಾ ಸ್ಕೂಟರ್ -1
  4. ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿಯಿಂದ ದಿನಾಂಕ: 27-03-2023 ರಂದು ಕಳವುಗೈದ ಯಮಹಾ ಎಫ್ ಝಡ್ ಬೈಕ್-1
  5. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆ ಬಳಿಯ ದುಬೈ ಮಾರ್ಕೆಟ್ ಪರಿಸರದಿಂದ ದಿನಾಂಕ: 27-03-2023 ರಂದು ಕಳವುಗೈದ ಯಮಹಾ ಎಫ್ ಝಡ್ ಬೈಕ್-1
  6. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂತೂರು ತಾರೆನೋಟ ಬಳಿಯಿಂದ ದಿನಾಂಕ: 30-03-2023 ರಂದು ಕಳವುಗೈದ ಹೊಂಡಾ ಅಕ್ಟಿವಾ ಸ್ಕೂಟರ್-1

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಶ್ರೀ ಪಿ ಎ ಹೆಗ್ಡೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ಸುದೀಪ್, ಶರಣಪ್ಪ ಭಂಡಾರಿ, ಎಎಸ್ಐ ಮೋಹನ್ ಕೆ.ವಿ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.



Join Whatsapp