ಹಿಂಸಾಚಾರ ನಡೆದ ರಾಮನವಮಿ ಮೆರವಣಿಗೆಯಲ್ಲಿ ಪಿಸ್ತೂಲು ಪ್ರದರ್ಶಿಸಿದವನ ಬಂಧನ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಮನವಮಿ ಮೆರವಣಿಗೆಯ ವೈರಲ್ ಆದ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಪಿಸ್ತೂಲು ಹಿಡಿದಿದ್ದು, ಆತನನ್ನು ಗುರುತಿಸಿ ಬಂಧಿಸಲಾಗಿದೆ.

- Advertisement -


ಈ 19ರ ಹರೆಯದ ಸುಮಿತ್ ಶಾ ಬಿಹಾರದ ಮುಂಗರ್ ನವನಾಗಿದ್ದು, ಪಶ್ಚಿಮ ಬಂಗಾಳದ ರಾಮ ನವಮಿ ಮೆರವಣಿಗೆಯಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದ.
ಸುಮಿತ್ ಪಿಸ್ತೂಲು ಹಿಡಿದ ಬಗ್ಗೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.


ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಶಾ ಪಿಸ್ತೂಲು ಹಿಡಿದಿರುವುದು ಕಾಣಿಸಿದೆ.
ಬಿಜೆಪಿಯ ದಂಗಾಬಾಜಿ ಫಾರ್ಮುಲ ಮತ್ತೆ ಕೆಲಸ ಮಾಡುತ್ತಿದೆ. ಸಮುದಾಯಗಳನ್ನು ಪರಸ್ಪರ ಪ್ರಚೋದಿಸಿ ಎತ್ತಿ ಕಟ್ಟುವುದು, ಬೇಕೆಂದೇ ಕೋಮು ಗಲಭೆ ಹುಟ್ಟು ಹಾಕುವುದು, ರಾಜಕೀಯ ಲಾಭ ಪಡೆಯುವ ಹುನ್ನಾರ ಎಂದು ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದರು

- Advertisement -


ಬಿಜೆಪಿಯು ಇದು ರಾಮ ನವಮಿ ಮೆರವಣಿಗೆ ಅಲ್ಲ, ಹೌಡಾದಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸಿದ ಮೆರವಣಿಗೆ ಎಂದು ಹೇಳಿದೆ. ಹೂಗ್ಲಿಯ ಹೌಡಾದ ರಾಮ ನವಮಿ ಮೆರವಣಿಗೆಯಲ್ಲಿ ಗಲಭೆ ಹಿಂಸೆ ಆಗಿತ್ತು, ಹಲವಾರು ವಾಹನಗಳು ಬೆಂಕಿಗಾಹುತಿಯಾಗಿದ್ದವು. ಅಂಗಡಿಗಳ ಲೂಟಿ ಆಗಿತ್ತು.



Join Whatsapp