ಹಿಂಸಾಚಾರಬಾಧಿತ ವಡೋದರಕ್ಕೆ ಎಸ್’ಡಿಪಿಐ ನಿಯೋಗ ಭೇಟಿ, ಸಂತ್ರಸ್ತರಿಗೆ ಸಾಂತ್ವನ, ಪೊಲೀಸ್ ಆಯುಕ್ತರೊಂದಿಗೆ ಚರ್ಚೆ

Prasthutha|

ಅಹಮದಾಬಾದ್: ರಾಮನವಮಿ ಹೆಸರಿನಲ್ಲಿ ಹಿಂಸಾಚಾರ ನಡೆದ ಗುಜರಾತ್’ನ ವಡೋದರಕ್ಕೆ ಗುಜರಾತ್ ಎಸ್ ಡಿಪಿಐ ನಿಯೋಗ ಸೋಮವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿತು. ಇದೇ ವೇಳೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

- Advertisement -


ನಿಯೋಗದಲ್ಲಿ ಗುಜರಾತ್ ರಾಜ್ಯ ಸಂಚಾಲಕ ಉವೈಸ್ ಶೇಖ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಲಾಲ್ ಖ್ವಾಝಿ, ರಾಜ್ಯ ಕೋಶಾಧಿಕಾರಿ ಖಾಲಿದ್ ಖುರೇಷಿ, ರಾಜ್ಯ ಸಮಿತಿ ಸದಸ್ಯ ಇರ್ಷಾದ್ ಶೇಖ್, ವಕೀಲರಾದ ತಾರಿಕ್ ಮಂಡಲಿ, ವಕೀಲ ಸೋಲಂಕಿ ಇದ್ದರು.
ಎಸ್.ಡಿ.ಪಿ.ಐ. ನಿಯೋಗವು ಮೊದಲು ಸಂತ್ರಸ್ತರು ಹೆಚ್ಚಿರುವ ಪ್ರದೇಶಕ್ಕೆ ತೆರಳಿ ಬಂಧಿತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿತು. ನಂತರ ಅವರು ಸತ್ಯಾಂಶಗಳನ್ನು ಅರಿಯಲು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಬಳಿಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿತು.


ಸ್ಥಳೀಯ ಪೊಲೀಸರು ಮತ್ತು ಜುಲೂಸ್ ಸಂಘಟಕರ ನಿರ್ಲಕ್ಷ್ಯದ ಬಗ್ಗೆ ಎಸ್’ಡಿಪಿಐ ಮುಖಂಡರು ಆರೋಪ ಮಾಡಿದ್ದಾರೆ.
ರಾಮನವಮಿ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ವಿಧಿಸಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಈಗಾಗಲೇ ಎಸ್ ಡಿಪಿಐ ಗುಜರಾತ್ ಡಿಜಿಪಿಗೆ 4 ದಿನಗಳ ಮುಂಚಿತವಾಗಿ ಮನವಿ ಪತ್ರ ಸಲ್ಲಿಸಿತ್ತು. ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗಳನ್ನು ಬಳಸದಂತೆ ಕ್ರಮಕೈಗೊಳ್ಳಬೇಕು. ಯಾವುದೇ ಶಸ್ತ್ರಾಸ್ತ್ರ ಪ್ರದರ್ಶಿಸದಂತೆ ಕ್ರಮಕೈಗೊಳ್ಳಬೇಕು. ಕೋಮು ಘೋಷಣೆ ಮತ್ತು ಆಕ್ಷೇಪಾರ್ಹ ಹೇಳಿಕೆ, ಭಾಷಣಗಳಿಗೆ ಅವಕಾಶ ನೀಡಬಾರದು ಎಂದು ಎಸ್ ಡಿಪಿಐ ಈ ಮೊದಲೇ ಮನವಿ ಸಲ್ಲಿಸಿತ್ತು. ಆದರೆ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿದೆ ಎಂದು ನಿಯೋಗ ಆರೋಪಿಸಿದೆ.



Join Whatsapp