ಹುಲಿ ದಾಳಿಗೆ ಹಸು ಬಲಿ

Prasthutha|

ಕೊಟ್ಟಿಗೆಹಾರ: ಸಮೀಪದ ತರುವೆ ಗ್ರಾಮದಲ್ಲಿ ಹುಲಿ ದಾಳಿಯಿಂದ ಹಸುವೊಂದು ಬಲಿಯಾಗಿರುವ ಘಟನೆ ನಡೆದಿದೆ.
ತರುವೆ ಗ್ರಾಮದ ಟಿ.ಆರ್.ದೇವರಾಜ್ ಗೌಡ ಅವರ ಹಸು ಎರಡು ದಿನದಿಂದ ಕಾಣೆಯಾಗಿದ್ದು ಇಂದು ಅವರ ತೋಟದಲ್ಲಿ ಅದರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಪಶು ಅಧಿಕಾರಿ ಅಝೀಝ್ ಅಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹುಲಿ ದಾಳಿಯಿಂದ ಹಸು ಮೃತ ಪಟ್ಟಿರಬಹುದೆಂದು ಶಂಕಿಸಿದ್ದಾರೆ. ಅರಣ್ಯ ಗಸ್ತು ಅಧಿಕಾರಿ ಅಭಿಜಿತ್ ಇದ್ದರು.



Join Whatsapp