ಮಂಗಳೂರು: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಎರಡು ಧರ್ಮಗಳ ನಡುವೆ ಮತ್ತು ಕೋಮುಗಳ ನಡುವೆ ಸಂಘರ್ಷ ಹುಟ್ಟಿಸುವಂತಹ ಭಾಷಣ ಮಾಡಿದರೆ, ಇನ್ನೊಂದು ಧರ್ಮವನ್ನು ನಿಂದಿಸಿದರೆ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಕೋಮುದ್ವೇಷದ ಭಾಷಣಕ್ಕೆ ಅವಕಾಶವಿಲ್ಲ. ಇಂತಹ ಚಟುವಟಿಕೆಗಳ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ಇಡಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮವನ್ನು ನಿಂದಿಸುವುದು, ಕೋಮುದ್ವೇಷ ಹರಡುವುದರ ಮೇಲೆ ನಿಗಾ ಇಡಲಾಗುವುದು. ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದರ ಮೇಲೂ ನಿಗಾ ಇಡಲಾಗಿದೆ. ಇದಕ್ಕಾಗಿಯೇ ವಿಶೇಷ ಸೈಬಲ್ ಸೆಲ್ ಸ್ಥಾಪಿಸಲಾಗಿದೆ ಎಂದು ರವಿಕುಮಾರ್ ತಿಳಿಸಿದರು.
ಕೋಮುದ್ವೇಷ ಹರಡಿದರೆ, ಕೋಮು ಭಾಷಣ ಮಾಡಿದರೆ ಸ್ವಯಂಪ್ರೇರಿತ ದೂರು ದಾಖಲು: ಜಿಲ್ಲಾಧಿಕಾರಿ ರವಿಕುಮಾರ್
Prasthutha|